Select Your Language

Notifications

webdunia
webdunia
webdunia
webdunia

ಗೋವಾ: ತಪ್ಪಿದ ಭಾರಿ ವಿಮಾನ ದುರಂತ

Jet Flight
ಪಣಜಿ , ಮಂಗಳವಾರ, 27 ಡಿಸೆಂಬರ್ 2016 (09:14 IST)
ಗೋವಾದಲ್ಲಿ ಇಂದು ನಸುಕಿನ ಜಾವ ಭಾರಿ ವಿಮಾನ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದ್ದು 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮುಂಜಾನೆ 4.45ಕ್ಕೆ ದಾಬೋಲಿಮ್ ವಿಮಾನನಿಲ್ದಾಣದಿಂದ ಮುಂಬೈ ಕಡೆಗೆ ಹೊರಟ ಜೆಟ್ ಏರ್‌ವೇಸ್  9 ಡಬ್ಲ್ಯೂ 2374 ವಿಮಾನ ತಾಂತ್ರಿಕ ದೋಷದಿಂದ ಟೇಕ್ ಆಫ್ ಆಗುವಾಗ 360 ಡಿಗ್ರಿಗೆ ತಿರುಗಿದ ಪ್ರಯಾಣ ರನ್ ವೇನಿಂದ ಜಾರಿದೆ. 
 
ವಿಮಾನದಲ್ಲಿ 7 ಸಿಬ್ಬಂದಿ 154 ಪ್ರಯಾಣಿಕರಿದ್ದರು. ಅವಘಡದ ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದ್ದು ಅವರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದು ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಮತ್ತೆ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಅವಘಡಕ್ಕೆ ಕಾರಣವೇನೆಂದು ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬರಲಿದೆ ’ಬೀಸ್ಟ್’ ಮೋಡ್‌ನಲ್ಲಿ ಸ್ಯಾಂಸಂಗ್ ಎಸ್ 8