Select Your Language

Notifications

webdunia
webdunia
webdunia
webdunia

ಆಕರ್ಷಕ ವ್ಯಕ್ತಿತ್ವವಿಲ್ಲವೆಂದು ಗಗನ ಸಖಿ ಕೆಲಸ ಸಿಗಲಿಲ್ಲ: ಸ್ಮೃತಿ ಇರಾನಿ

Jet Airways
ನವದೆಹಲಿ , ಗುರುವಾರ, 25 ಆಗಸ್ಟ್ 2016 (14:34 IST)
ಆಕರ್ಷಕ ವ್ಯಕ್ತಿತ್ವವಿಲ್ಲವೆಂಬ ಕಾರಣಕ್ಕೆ ಜೆಟ್ ಏರ್‌ವೇಸ್  ಕ್ಯಾಬಿನ್ ಸಿಬ್ಬಂದಿ ಸ್ಥಾನಕ್ಕೆ ನನ್ನನ್ನು ಅನರ್ಹಗೊಳಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುರುವಾರ ಹೇಳಿದ್ದಾರೆ. 

ಅಂದು ನಾನು ತಿರಸ್ಕೃತಗೊಂಡಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಬಳಿಕ ನಾನು ಮೆಕ್‌ಡೊನಾಲ್ಡ್‌ನಲ್ಲಿ ಕೆಲಸ ಗಿಟ್ಟಿಸಿದೆ. ಆಮೇಲಾದದ್ದೂ ಇತಿಹಾಸ ಎನ್ನುತ್ತಾರೆ ನಟಿ ಪರಿವರ್ತಿತ ರಾಜಕಾರಣಿ.
 
ಏರ್ ಪ್ಯಾಸೆಂಜರ್ ಅಸೋಸಿಯೇಷನ್ ಆಫ್ ಇಂಡಿಯಾ (APAI) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಜೆಟ್ ಏರ್‌ವೇಸ್ ಅಧಿಕಾರಿಗಳಿಗೆ ಪ್ರಶಸ್ತಿ ವಿತರಿಸಿ ಮಾತನ್ನಾಡುತ್ತಿದ್ದ ಜವಳಿ ಖಾತೆ ಸಚಿವೆ, ನಾನು ಇಲ್ಲಿ ಕೇವಲ ಒಬ್ಬ ಪ್ರಯಾಣಿಕಳಾಗಿ ಬಂದಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ