Select Your Language

Notifications

webdunia
webdunia
webdunia
webdunia

ಜಯಾ ಸಾವಿನ ವರದಿ ಕೇಳಿದ ಮದ್ರಾಸ್ ಹೈಕೋರ್ಟ್

ಜಯಾ ಸಾವಿನ ವರದಿ ಕೇಳಿದ ಮದ್ರಾಸ್ ಹೈಕೋರ್ಟ್
ಚೆನ್ನೈ , ಮಂಗಳವಾರ, 10 ಜನವರಿ 2017 (07:45 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಡಿಎಂಕೆ ನಾಯಕಿ ದಿವಂಗತ  ಜಯಲಲಿತಾ ಅವರ ಸಾವಿನ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಅಪೋಲೋ ಆಸ್ರತ್ರೆಗೆ ಸೂಚನೆ ನೀಡಿದೆ.
ಜಯಾ ಸಾವಿನ ಬಗ್ಗೆ ಎದ್ದಿರುವ ಅನುಮಾನಗಳ ನಿವಾರಣೆಗೆ ಕೋರ್ಟ್ ಈ ಕ್ರಮ ಕೈಗೊಂಡಿದ್ದು, ಮಾಜಿ ಸಿಎಂ ಸಾವು ಮತ್ತು ಅದಕ್ಕೂ ಮೊದಲಿನ ಅವರ ಅನಾರೋಗ್ಯ ಸಂಬಂಧಿ ವಿವರ ನೀಡುವಂತೆ ಕೋರ್ಟ್ ಕೇಳಿದೆ. 
 
ವರದಿಯನ್ನು ಒಪ್ಪಿಸಲು ಆಸ್ಪತ್ರೆಗೆ ನಾಲ್ಕುವಾರಗಳ ಕಾಲಾವಕಾಶ ನೀಡಿದೆ.
 
ಜ್ವರ ಮತ್ತು ನಿರ್ಜಲೀಕರಣದಿಂದ ಸೆಪ್ಟೆಂಬರ್ 23 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜೆ. ಜಯಲಲಿತಾ ಡಿಸೆಂಬರ್ 5 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆಸ್ಪತ್ರೆಗೆ ದಾಖಲಾಗಿದ್ದಾಗಿನಿಂದ ಸಾವನ್ನಪ್ಪುವವರೆಗೆ ಅವರ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಆಸ್ಪತ್ರೆಯಾಗಲಿ, ಸರ್ಕಾರವಾಗಲಿ ನೀಡಿರಲಿಲ್ಲ. ಜಯಾ ಅವರ ನಿಗೂಢ ಸಾವಿನ ಬಗ್ಗೆ ದೇಶಾದ್ಯಂತ ಅನುಮಾನಗಳು ಎದ್ದಿದ್ದು, ಈ ಕುರಿತು ತನಿಖೆಗೆ ಹಲವರು ಒತ್ತಾಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣಮೃಗ ಹತ್ಯೆ ಪ್ರಕರಣ: 18ಕ್ಕೆ ಅಂತಿಮ ತೀರ್ಪು