Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಅಮ್ಯಾ ಕ್ಯಾಂಟೀನ್, ವಾಟರ್ ಆಯ್ತು, ಈಗ 500 ಅಮ್ಮಾ ಜಿಮ್

ತಮಿಳುನಾಡಿನಲ್ಲಿ ಅಮ್ಯಾ ಕ್ಯಾಂಟೀನ್, ವಾಟರ್ ಆಯ್ತು, ಈಗ 500 ಅಮ್ಮಾ ಜಿಮ್
ಚೆನ್ನೈ: , ಮಂಗಳವಾರ, 30 ಆಗಸ್ಟ್ 2016 (17:30 IST)
ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟಿನ್, ಅಮ್ಮಾ ವಾಟರ್, ಅಮ್ಮಾ ಮೆಡಿಕಲ್ ಆಯ್ತು, ಈಗ 500 ಅಮ್ಮಾ ಜಿಮ್‌ಗಳನ್ನು ಮತ್ತು ಅಮ್ಮಾ ಪಾರ್ಕ್‌ಗಳನ್ನು ಯುವಜನರ ಸೌಲಭ್ಯಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತದೆ.  ಈ ಯೋಜನೆಗೆ 100ಕೋಟಿಗಿಂತ ಹೆಚ್ಚು ವೆಚ್ಚವಾಗುತ್ತದೆ.

ಗ್ರಾಮ ಪಂಚಾಯತ್‌ಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಇದನ್ನು ಸ್ಥಾಪಿಸಲಾಗುತ್ತದೆ. ಈ ಉದ್ಯಾನಗಳಲ್ಲಿ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಡುವ ಸಾಮಗ್ರಿಗಳು ಮತ್ತು ಸಿಮೆಂಟ್ ಬೆಂಚುಗಳು ಎಲ್ಲವೂ  ಇರುತ್ತದೆಂದು ಸಿಎಂ ಜಯಲಲಿತಾ ಅಸೆಂಬ್ಲಿಯಲ್ಲಿ ತಿಳಿಸಿದರು. 
 
ಹಸಿರು ಹುಲ್ಲಿನಿಂದ ಕಂಗೊಳಿಸುವ ಈ ಉದ್ಯಾನಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ಪೌರರು ಕಾಲ ಕಳೆಯಬಹುದು ಎಂದು ಅವರು ನುಡಿದರು. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ 500 ಅಮ್ಮಾ ಜಿಮ್ನಾಷಿಯಂಗಳನ್ನು ತಲಾ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿದೆ ಎಂದು ವರದಿ ಹೇಳಿದೆ.
 
ಜಿಮ್‌ಗಳು ಯುವಜನರಿಗೆ ಗ್ರಾಮೀಣಪ್ರದೇಶಗಳಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರಲು ನೆರವಾಗುತ್ತವೆ ಎಂದು ಮುಖ್ಯಮಂತ್ರಿ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಆರೋಪಿ ಬಂಧನ