Select Your Language

Notifications

webdunia
webdunia
webdunia
webdunia

ಮಹಿಳೆ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಆರೋಪಿ ಬಂಧನ

ಮಹಿಳೆ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಆರೋಪಿ ಬಂಧನ
ಬೆಂಗಳೂರು , ಮಂಗಳವಾರ, 30 ಆಗಸ್ಟ್ 2016 (17:18 IST)
ಮಹಿಳೆ ಮೇಲೆ ಏಕಾಏಕಿ ಹಲ್ಲೆ ನಡೆಸಿ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 
 
ದಾರ್ಜಿಲಿಂಗ್ ಮೂಲದ ಮಹಿಳೆ ಕಳೆದ ಆರು ವರ್ಷಗಳಿಂದ ಎಚ್‌ಎಎಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, ಮಹಿಳೆ ಮತ್ತು ಆರೋಪಿ ಪುನೀತ್ ಮಧ್ಯೆ ಜಗಳವಾಗಿತ್ತು ಎನ್ನಲಾಗಿದೆ.
 
ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಪುನೀತ್, ಕಾರವಾರದ ಸಿದ್ದಾಪುರ ಮೂಲದವನು ಎಂದು ತಿಳಿದು ಬಂದಿದೆ. ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ. 
 
ಮಹಿಳೆ ಮತ್ತು ಆರೋಪಿ ಮಧ್ಯೆ ನಿನ್ನೆ ತೀವ್ರವಾದ ಜಗಳ ನಡೆದಾಗ ಮಹಿಳೆ ಜೋರಾಗಿ ಕೂಗಿದ್ದರಿಂದ ಬೆದರಿದ ಆತ ಅಲ್ಲಿಂದ ಪರಾರಿಯಾಗಿದ್ದ. ನೇರವಾಗಿ ತನ್ನ ಉರಿಗೆ ತೆರಳಿದ್ದ ಎನ್ನುವ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹಣದುಬ್ಬರ ದರ ಇಳಿಕೆಯಾದ್ರೆ ರೆಪೋ ದರ ಕಡಿತ: ರಘುರಾಮ್ ರಾಜನ್