Select Your Language

Notifications

webdunia
webdunia
webdunia
webdunia

ಜಯಾ ಸೋದರನ ಪುತ್ರಿ ದೀಪಾ ಬೆಂಬಲಿಗರಿಂದ ರಾಜಭವನಕ್ಕೆ ಘೇರಾವ್: 50 ಪ್ರತಿಭಟನಾಕಾರರ ಬಂಧನ

ಜಯಾ ಸೋದರನ ಪುತ್ರಿ ದೀಪಾ ಬೆಂಬಲಿಗರಿಂದ ರಾಜಭವನಕ್ಕೆ ಘೇರಾವ್: 50 ಪ್ರತಿಭಟನಾಕಾರರ ಬಂಧನ
ಚೆನ್ನೈ , ಗುರುವಾರ, 9 ಫೆಬ್ರವರಿ 2017 (17:03 IST)
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಅವಕಾಶ ನೀಡುವುದು ವಿರೋಧಿಸಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸೋದರನ ಪುತ್ರಿ ದೀಪಾ ತಮ್ಮ ಬೆಂಬಲಿಗರೊಂದಿಗೆ ರಾಜಭವನಕ್ಕೆ ಘೇರಾವ್ ಹಾಕಿದ್ದಾರೆ.
 
ದೀಪಾ ಬೆಂಬಲಿಗರು ರಾಜಭವನದ ಮುಂದೆ ಪ್ರತಿಭಟನೆ ನಡೆಸಿ ಘೇರಾವ್ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
 
ಶಶಿಕಲಾ ಮುಖ್ಯಮಂತ್ರಿಯಾಗುವುದಕ್ಕೆ ಯಾವುದೇ ಅರ್ಹತೆಯಿಲ್ಲ. ಒಂದು ವೇಳೆ ಶಶಿಕಲಾ ಸಿಎಂ ಆದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾದಂತಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಒಂದು ಕಡೆ ಸಿಎಂ ಪನ್ನೀರ್ ಸೆಲ್ವಂ, ಶಶಿಕಲಾ ವಿರುದ್ಧ ಹೋರಾಟ ಮುಂದುವರಿಸಿದ್ದರೆ, ಮತ್ತೊಂದೆಡೆ ದೀಪಾ ಕೂಡಾ ತಮ್ಮ ಬೆಂಬಲಿಗರೊಂದಿಗೆ ಶಶಿಕಲಾ ವಿರುದ್ಧ ಸಮರ ಸಾರಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಚೆ ನಿಮ್ದು, ನಿದ್ರೆ ನಮ್ದು: ಅಧಿವೇಶನದಲ್ಲಿ ನಿದ್ರೆಗೆ ಜಾರಿದ ಸಚಿವರು