ಮೆಟ್ಟೂರು ಡ್ಯಾಂ ಭರ್ತಿಯಾಗುವ ಆತಂಕದ ಹಿನ್ನೆಲೆಯಲ್ಲಿ ಸಾಂಬಾ ಬೆಳೆ ಬೆಳೆಯುವ ಪ್ರದೇಶಗಳಿಗೆ ಮೆಟ್ಟೂರು ಜಲಾಶಯದಿಂದ ನೀರು ಬಿಡುವಂತೆ ಮುಖ್ಯಮಂತ್ರಿ ಜೆ.ಜಯಲಲಿತಾ ಆದೇಶ ನೀಡಿದ್ದಾರೆ.
ಮೆಟ್ಟೂರು ಜಲಾಶಯದಿಂದ ಸೆಪ್ಟೆಂಬರ್ 20 ರಿಂದ ನೀರು ಹರಿದುಬಿಡುವಂತೆ ಜಲಸಂಪನ್ಮೂಲ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಮೆಟ್ಟೂರ್ ಡ್ಯಾಂ ಗರಿಷ್ಠ ನೀರಿನ ಸಂಗ್ರಹ 120 ಅಡಿಗಳಾಗಿದ್ದು, ಈಗಾಗಲೇ 84.76 ಅಡಿ ನೀರು ಸಂಗ್ರಹವಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ಜಲಾಶಯಗಳಿಂದ ಹೆಚ್ಚಿನ ನೀರು ಹರಿದುಬರುತ್ತಿದೆ. ಮುಂಗಾರು ಮಳೆ ಕೂಡಾ ಆರಂಭವಾಗಿದೆ. ಕಾವೇರಿಯಿಂದ ಹೆಚ್ಚಿನ ನೀರು ಹರಿದು ಬಂದಲ್ಲಿ ಡ್ಯಾಂ ಭರ್ತಿಯಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಸರಕಾರ ಬಿಳಿಗುಂಡ್ಲು ಜಲಾಶಯದಿಂದ ಸೆಪ್ಟೆಂಬರ್ 14 ರವರೆಗೆ 8.92 ಟಿಎಂಸಿ ನೀರು ತಮಿಳುನಾಡಿಗೆ ಬಿಟ್ಟಿದೆ ಎಂದು ಮುಖ್ಯಮಂತ್ರಿ ಜೆ. ಜಯಲಲಿತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ