ಪವಿತ್ರ ರಮ್ಜಾನ್ ಮಾಸದಲ್ಲಿ ಗಂಜಿ ತಯಾರಿಸಲೆಂದು ಮಸೀದಿಗಳಿಗೆ ಉಚಿತ ಅಕ್ಕಿ ಪೂರೈಸಲು ತಮಿಳುನಾಡು ಸರ್ಕಾರ ಆದೇಶಿಸಿದೆ.
ರಾಜ್ಯದಲ್ಲಿರುವ 3,000 ಮಸೀದಿಗಳಿಗೆ 4,600 ಟನ್ ಅಕ್ಕಿಯನ್ನು ಪೂರೈಸುವಂತೆ ಆದೇಶಿಸಿದ್ದೇನೆ ಎಂದು ಸಿಎಂ ಜಯಲಲಿತಾ ಹೇಳಿಕೆ ಪ್ರಕಟಿಸಿದ್ದಾರೆ.
ಈ ಯೋಜನೆಯನ್ನು ಮುಸ್ಲಿಂ ಸಮುದಾಯ ದೊಡ್ಡ ಮಟ್ಟದಲ್ಲಿ ಸ್ವಾಗತಿಸಿದೆ. ಈ ವರ್ಷ ಕೂಡ ಅಕ್ಕಿಯನ್ನು ಪೂರೈಸಿ ಎಂಬ ಮನವಿ ಬರುತ್ತಿದ್ದಂತೆ ನಾನು ಈ ಆದೇಶಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
2001ರ ಅಧಿಕಾರಾವಧಿಯಲ್ಲಿ ಜಯಾ ಈ ಯೋಜನೆಯನ್ನು ಪರಿಚಯಿಸಿದ್ದರು.
ಮಸೀದಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 3,000 ಮಸೀದಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲಿದ್ದು ಮತ್ತು ಬೊಕ್ಕಸಕ್ಕೆ 2.14 ಕೋಟಿ ವೆಚ್ಚವಾಗುತ್ತದೆ ಎಂದು ತಿಳಿದು ಬಂದಿದೆ.