Select Your Language

Notifications

webdunia
webdunia
webdunia
webdunia

ತಮಿಳುನಾಡು ರಾಜಕೀಯಕ್ಕಿಂದು ಹೊಸ ಪಕ್ಷ ಸೇರ್ಪಡೆ

ತಮಿಳುನಾಡು ರಾಜಕೀಯಕ್ಕಿಂದು ಹೊಸ ಪಕ್ಷ ಸೇರ್ಪಡೆ
ಚೆನ್ನೈ , ಶುಕ್ರವಾರ, 24 ಫೆಬ್ರವರಿ 2017 (09:54 IST)
ತಮಿಳುನಾಡಿನ ರಾಜಕೀಯದಲ್ಲಿ ಇಂದು ಹೊಸ ಪರ್ವ ಆರಂಭವಾಗಲಿದೆ. ಈ ಹಿಂದೆ ಘೋಷಿಸಿದಂತೆ  ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಇಂದು ಹೊಸ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ.

ಜಯಾ ಜನ್ಮದಿನದಂದು ತಾವು ಹೊಸ ಪಕ್ಷವನ್ನು ಘೋಷಿಸುವುದಾಗಿ ಹೇಳಿದ್ದ ದೀಪಾ ತಮ್ಮ ನಿವಾಸದಲ್ಲಿ ಪಕ್ಷದ ಕಚೇರಿಯನ್ನು ಆರಂಭಿಸಿದ್ದು ಇಂದು ಸಂಜೆ ಪಕ್ಷದ ಹೆಸರು ಮತ್ತು ಧ್ವಜವನ್ನು ಸಂಜೆ ಬಹಿರಂಗ ಪಡಿಸಿದ್ದಾರೆ.
 
ಜಯಾ ನಿಧನರಾಗುತ್ತಿದ್ದಂತೆ ರಾಜಕೀಯ ಪ್ರವೇಶಿಸಲು ಸಿದ್ಧರಾದ ಜಯಲಲಿತಾ ಸೋದರನ ಮಗಳು ದೀಪಾ ಜಯಕುಮಾರ್ ಚೆನ್ನೈನ ಮರೀನಾ ಬೀಚ್ ನಲ್ಲಿ ಜನವರಿ 17ರಂದು ನಡೆದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ  ಘೋಷಿಸಿದ್ದರು.
 
ನನ್ನ ಮುಂದೆ ಎರಡು ಆಯ್ಕೆಗಳಿವೆ ಎಐಎಡಿಎಂಕೆ ಸೇರುವುದು ಅಥವಾ ಹೊಸ ಪಕ್ಷ ಕಟ್ಟುವುದು. ನಾನು ಈ ಬಗ್ಗೆ ನನ್ನ ಬೆಂಬಲಿಗರ ಜತೆ ಚರ್ಚೆ ಮಾಡಿ ನಿರ್ಧಾ ಕೈಗೊಳ್ಳುತ್ತೇನೆ. ಅಮ್ಮ ಜಯಲಲಿತಾ ಅವರ ಹುಟ್ಟುಹಬ್ಬದ ದಿನ(ಫೆ.24)ದಂದು ಈ ಬಗ್ಗೆ ನಿರ್ಣಯ ಪ್ರಕಟಿಸುತ್ತೇನೆ ಎಂದು ದೀಪಾ ಹೇಳಿದ್ದರು.
 
ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾ ಸೋದರತ್ತೆ ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾರ ಅವರಲ್ಲಿ ನಾವು ಕಳೆದುಕೊಂಡ ಅಮ್ಮನನ್ನು ಕಾಣುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಿರುವುದು ದೀಪಾ ರಾಜಕೀಯ ಮಹಾತ್ವಾಕಾಂಕ್ಷೆಗೆ ಇಂಬು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಿಜವಾದ ಬಣ್ಣ ಬಯಲು: ಕೆ.ಎಸ್. ಈಶ್ವರಪ್ಪ