ಕಳೆದ 15 ದಿನಗಳಲ್ಲಿ ಜನ್‌ಧನ್ ಖಾತೆಗಳಿಂದ ಒಟ್ಟು 3285ಕೋಟಿ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ನವೆಂಬರ್ 8 ರಂದು ದೊಡ್ಡ ಮುಖಬೆಲೆ ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಜನ್‌ಧನ್ ಖಾತೆಗಳಲ್ಲಿ ಏಕಾಏಕಿ ಭಾರಿ ಮೊತ್ತದ ಠೇವಣಿ ಏರಿಕೆಯಾಗಿತ್ತು.
ಡಿಸೆಂಬರ್ 8 ರ ನಂತರ ಜನ್‌ಧನ್ ಖಾತೆಗಳಿಗೆ ಠೇವಣಿಯಾದ ಒಟ್ಟು ಮೊತ್ತ 74,610 ಕೋಟಿ ರೂ. ನೋಟು ಹಿಂದೆಗೆತ ಪ್ರಕ್ರಿಯೆ ಕೊನೆಗೊಳ್ಳುವ ಎರಡು ದಿನ ಮೊದಲು ಅಂದರೆ ಡಿಸೆಂಬರ್ 28ಕ್ಕೆ ಇದರಲ್ಲಿ 3285ಕೋಟಿ ರೂಪಾಯಿಯನ್ನು ಹಿಂದೆಗೆದುಕೊಳ್ಳಲಾಗಿದೆ.
ನೋಟು ನಿಷೇಧವಾದಾಗ ಜನ್‌ಧನ್ ಖಾತೆಗಳಲ್ಲಿ 45,636,61 ರೂಪಾಯಿ ಹಣವಿತ್ತು. ಆನಂತರ ಒಂದು ತಿಂಗಳಲ್ಲಿ ಈ ಮೊತ್ತ 28, 973ಕ್ಕೆ ಏರಿತ್ತು. ಡಿಸೆಂಬರ್ 28ಕ್ಕೆ ಈ ಮೊತ್ತ 71, 037ಕ್ಕೆ ಇಳಿಕೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.