Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ರಾಜಕೀಯದಿಂದಲೇ ಹೊರಹಾಕುತ್ತೇನೆ: ಅಬ್ಬರಿಸಿದ ಮಮತಾ ಬ್ಯಾನರ್ಜಿ

ಪ್ರಧಾನಿ ಮೋದಿಯನ್ನು ರಾಜಕೀಯದಿಂದಲೇ ಹೊರಹಾಕುತ್ತೇನೆ: ಅಬ್ಬರಿಸಿದ ಮಮತಾ ಬ್ಯಾನರ್ಜಿ
ಕೋಲ್ಕತಾ , ಸೋಮವಾರ, 28 ನವೆಂಬರ್ 2016 (14:28 IST)
ನೋಟು ನಿಷೇಧ ಕುರಿತಂತೆ ಸಾವಿರಾರು ಬೆಂಬಲಿಗರೊಂದಿಗೆ ಆಕ್ರೋಶ ದಿವಸ್ ಆಚರಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿಯನ್ನು ರಾಜಕೀಯದಿಂದಲೇ ಹೊರಹಾಕುತ್ತೇನೆ ಎಂದು ಗುಡುಗಿದ್ದಾರೆ. 
 
ಪೂರ್ವ ಸಿದ್ದತೆಯಿಲ್ಲದೇ ನೋಟು ನಿಷೇಧ ಜಾರಿಗೊಳಿಸಿದ್ದರಿಂದ ದೇಶದ ಕೋಟಿ ಕೋಟಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿ ಮೋದಿಯ ಇದೇ ನೀತಿ ಮುಂದುವರಿದಲ್ಲಿ ಅವರನ್ನು ರಾಜಕೀಯದಿಂದಲೇ ನಿರ್ಗಮಿಸುವಂತೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರಧಾನಿ ಮೋದಿ ಕೂಡಲೇ ನೋಟು ನಿಷೇಧ ಜಾರಿಯನ್ನು ಹಿಂಪಡೆಯಬೇಕು ಎಂದು ಮಮತಾ ಒತ್ತಾಯಿಸಿದಾಗ ಮೋದಿ ಸರಕಾರ ಹಾಯ್ ಹಾಯ್ ಎನ್ನುವ ಘೋಷಣೆಗಳನ್ನು ಅವರ ಬೆಂಬಲಿಗರು ಕೂಗಿದರು.
 
ಭಾರತ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ. ಸರ್ವಾಧಿಕಾರಿ ಧೋರಣೆ ಮುಂದುವರಿಸಿದಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು. 
 
ಕೇಂದ್ರ ಸರಕಾರದ ನೋಟು ನಿಷೇಧ ಕುರಿತಂತೆ ದೇಶಾದ್ಯಂತ ಕೆಲ ಪಕ್ಷಗಳು 12 ಗಂಟೆಗಳ ಬಂದ್‌ಗೆ ಕರೆ ನೀಡಿದ್ದರೆ, ಕೆಲ ಪಕ್ಷಗಳು ಜನ್ ಆಕ್ರೋಶ್ ದಿವಸ್ ಆಚರಣೆಯಲ್ಲಿ ಪಾಲ್ಗೊಂಡಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿ ಪತ್ನಿ ಬಂಧನ: 79 ಲಕ್ಷ ರೂ.ವಶಕ್ಕೆ