Select Your Language

Notifications

webdunia
webdunia
webdunia
webdunia

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿಲ್ಲ: ಒಮರ್‌ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿಲ್ಲ: ಒಮರ್‌ ಅಬ್ದುಲ್ಲಾ
bengaluru , ಗುರುವಾರ, 19 ಮೇ 2022 (22:20 IST)
ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಮಾಜಿ ಸಿಎಂ, ನ್ಯಾಷನಲ್‌ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗರಿಕ ಹತ್ಯೆಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಿದೆ.ಈ ವಾರದಲ್ಲಿ ಇಂತಹ ಮೂರು ಹತ್ಯೆಗಳು ನಡೆದಿವೆ. ಕೆಲವೇ ತಿಂಗಳ ಬಳಿಕ ಇಂತಹ ವಿದ್ಯಮಾನಗಳು ಪುನಃ ಮರುಕಳಿಸುತ್ತವೆ. ನಂತರ ಕೆಲವು ದಿನಗಳ ವರೆಗೆ ಸ್ಥಗಿತವಾಗುತ್ತದೆ' ಎಂದು ಒಮರ್‌ ಅಬ್ದುಲ್ಲಾ ಹೇಳಿದರು.
ಧ್ವನಿವರ್ಧಕ ನಿಷೇಧದ ಕುರಿತು ಮಾತನಾಡಿದ ಅಬ್ದುಲ್ಲಾ, ಜನರ ಭಾವನೆಗಳನ್ನು ಗೌರವಿಸಬೇಕು. ಧ್ವನಿವರ್ಧಕಗಳಿಂದ ಉಂಟಾಗುತ್ತಿರುವ ಶಬ್ದದ ಸಮಸ್ಯೆ ಬಗೆಹರಿಸಲು ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಬೇಕಿದೆ' ಎಂದರು.370ನೇ ರದ್ದು ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, 'ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ನ್ಯಾಯಾಲಯದ ಮುಂದೆ ನಮ್ಮ ವಾದವನ್ನು ಮುಂದಿಡುತ್ತೇವೆ. ಅನ್ಯ ರಾಷ್ಟ್ರದವರ ಭಾಷೆಯಲ್ಲಿ ಮಾತನಾಡುವ ಮಂದಿ ನಾವಲ್ಲ' ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಮತ್ತೆ ಟಾಂಗ್ ನೀಡಿದ ನಟ ಪ್ರಕಾಶ್ ರಾಜ್