Select Your Language

Notifications

webdunia
webdunia
webdunia
webdunia

ಕಾಶ್ಮೀರ ಅಶಾಂತಿ ವಿಷಯದಲ್ಲಿ ಜೇಟ್ಲಿ ರಾಜಕೀಯ ಮಾಡುತ್ತಿದ್ದಾರೆ: ಕಾಂಗ್ರೆಸ್

ಕಾಶ್ಮೀರ ಅಶಾಂತಿ ವಿಷಯದಲ್ಲಿ ಜೇಟ್ಲಿ  ರಾಜಕೀಯ ಮಾಡುತ್ತಿದ್ದಾರೆ:  ಕಾಂಗ್ರೆಸ್
ಶ್ರೀನಗರ , ಮಂಗಳವಾರ, 23 ಆಗಸ್ಟ್ 2016 (17:34 IST)
ಕಳೆದ ಹಲವು ದಿನಗಳಿಂದ ಕಣಿವೆನಾಡು ಕಾಶ್ಮೀರದಲ್ಲಿ ನಡೆಯುತ್ತಿರುವ ಅಶಾಂತಿ ವಿಷಯದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರಾಜಕೀಯದಾಟವಾಡುತ್ತಿದ್ದಾರೆ. ಶಾಂತಿ ಪಾಲನೆ ಮಾಡಿ ಎಂದು ಮನವಿ ಮಾಡುವ ಬದಲು ಪರಿಸ್ಥಿತಿಯನ್ನು ಉಲ್ಭಣಗೊಳಿಸುವಂತಹ ಮಾತುಗಳನ್ನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ. 
 
ಮತವನ್ನು ಭದ್ರ ಪಡಿಸಿಕೊಂಡ ಬಳಿಕ, ಜಮ್ಮು ವಲಯದ ಜನರ ಬಳಿ ಸ್ನೇಹಪೂರ್ವಕವಲ್ಲದ ಮತ್ತು ತಪ್ಪು ದೃಷ್ಟಿಕೋನವನ್ನು ತೋರಿಸುವುದರ ಮೂಲಕ ಬಿಜೆಪಿ ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ತಾವು ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಜೇಟ್ಲಿ ಈ ರೀತಿಯ ರಾಜಕೀಯದಾಟವನ್ನು ಆಡುತ್ತಿದ್ದಾರೆ ಎಂದು ಜೆಕೆಪಿಸಿಸಿ ವಕ್ತಾರ ಕಿಡಿಕಾರಿದ್ದಾರೆ.
 
ಈ ಪರಿಸ್ಥಿತಿಯನ್ನು ಕೊನೆಗೊಳಿಸಲು ಸರ್ಕಾರ ಕೆಲವು ಕ್ರಿಯಾಶೀಲ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದಾಗಿ ಜೇಟ್ಲಿ ಮಾತನಾಡಿದ್ದರೆ ಉಚಿತವಾಗಿತ್ತು. ಆದರೆ ದುರದೃಷ್ಟವಶಾತ್ ಅವರು ಅದನ್ನು ಮಾಡಲಿಲ್ಲ. ಬೆಂಕಿಗೆ ಮತ್ತಷ್ಟು ಎಣ್ಣೆಯನ್ನು ಸುರಿದರು ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.  
 
ವಾಸ್ತವವಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ಈ ಅಶಾಂತಿ, ಶೋಷಣೆಯ ರಾಜಕೀಯ ಮತ್ತು ಪಿಡಿಪಿ -ಬಿಜೆಪಿ ಸಮ್ಮಿಶ್ರ ಸರ್ಕಾರ ಜನರಿಗೆ ಮಾಡಿರುವ ನಂಬಿಕೆದ್ರೋಹದ ಪ್ರಕೋಪ ಎಂದು ಅವರು ಪ್ರತಿಪಾದಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಿಜೆಪಿ ಕೋರ್ ಸಮಿತಿ ಕಾರ್ಯಾಗಾರ ಉದ್ಘಾಟಿಸಲಿರುವ ಅಮಿತ್ ಶಾ