Select Your Language

Notifications

webdunia
webdunia
webdunia
webdunia

2000ರೂಪಾಯಿ ಝೆರಾಕ್ಸ್ ನೋಟ್; ವ್ಯಕ್ತಿಯ ಬಂಧನ

2000ರೂಪಾಯಿ ಝೆರಾಕ್ಸ್ ನೋಟ್; ವ್ಯಕ್ತಿಯ ಬಂಧನ
ಜೈಪುರ್ , ಬುಧವಾರ, 16 ನವೆಂಬರ್ 2016 (14:47 IST)
2000ರೂಪಾಯಿ ನೋಟಿನ ಕಲರ್ ಝೆರಾಕ್ಸ್ ಕೊಟ್ಟು ವೈನ್ ಖರೀದಿಸಲು ಯತ್ನಿಸಿದ 60 ವರ್ಷದ ವ್ಯಕ್ತಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. 
ಝುಂಝುನು ಜಿಲ್ಲೆಯ ಛಿರಾವಾ ನಗರದಲ್ಲಿ ಸೋಮವಾರ ಸಂಜೆ ಮದ್ಯದಂಗಡಿಗೆ ಬಂದ ವ್ಯಕ್ತಿಯೊಬ್ಬ 2,000ರೂಪಾಯಿ ನೋಟನ್ನು ವ್ಯಾಪಾರಿ ಕೈಗಿಟ್ಟಿದ್ದಾನೆ. ಮೊದಲು ಅದು ನಿಜವಾದ ನೋಟೆಂದು ಅಂಗಡಿಯವನು ಅದನ್ನು ಸ್ವೀಕರಿಸಿದ್ದಾನೆ. ಅಂಗಡಿಯಲ್ಲಿ ನೂಕುನುಗ್ಗಲು ಇದ್ದುದರಿಂದ ಅದನ್ನಾತ ಸರಿಯಾಗಿ ಗಮನಿಸಿರಲಿಲ್ಲ. ಆದರೆ ಆತ ಚಿಲ್ಲರೆ ಹಣವನ್ನು ಮರಳಿ ಕೊಡಲು ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದವಾಗಿದೆ. 
 
ಬಳಿಕ ಆತನಿಗೆ ಅದು ಝೆರಾಕ್ಸ್ ನೋಟ್ ಎಂಬುದು ಗೊತ್ತಾಗಿದೆ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 
 
ಆರೋಪಿಯನ್ನು ಲಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಅಂಗಡಿಯಲ್ಲಿ ಬಹಳ ಜನರಿದ್ದುದರಿಂದ ಚಿಲ್ಲರೆ ಕೊಡಲು ಅಂಗಡಿಯಾತ ವಿಳಂಬ ಮಾಡಿದ್ದಾನೆ. ಅದಕ್ಕೆ ಸಿಂಗ್ ಜಗಳಕ್ಕೆ ಇಳಿದಿದ್ದಾನೆ. ಆತನ ಆತುರತೆ ಕಂಡು ಸಂಶಯಗೊಂಡು ಅಂಗಡಿಯಾತ ದೂರು ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಜನರು ಸಾಯುತ್ತಿದ್ದಾರೆ, ಮೋದಿ ನಗುತ್ತಿದ್ದಾರೆ: ರಾಹುಲ್ ಗಾಂಧಿ