Select Your Language

Notifications

webdunia
webdunia
webdunia
webdunia

ಶಶಿಕಲಾರಂತೆ ಜಗನ್‌ಗೂ ಜೈಲು

ಶಶಿಕಲಾರಂತೆ ಜಗನ್‌ಗೂ ಜೈಲು
ವಿಜಯವಾಡಾ , ಶುಕ್ರವಾರ, 17 ಫೆಬ್ರವರಿ 2017 (13:36 IST)
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಲಾ ನಟರಾಜನ್ ಅವರಂತೆ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ಸಹ ಜೈಲು ಸೇರಲಿದ್ದಾರೆ, ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭವಿಷ್ಯ ನುಡಿದಿದ್ದಾರೆ.
ತಾವು ಪ್ರತಿನಿಧಿಸುವ ಕುಪ್ಪಂ ಕ್ಷೇತ್ರದಲ್ಲಿ ತೆಲುಗು ದೇಶಂ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಒಂದು ದಿನ ಜಗನ್ ಕೂಡ ಸೆರೆಮನೆ ಸೇರಲಿದ್ದಾರೆ ಎಂದಿದ್ದಾರೆ.
 
ಭ್ರಷ್ಟಾಚಾರ ನಡೆಸಿದ್ದ ಶಶಿಕಲಾ 20 ವರ್ಷದ ಬಳಿಕ ಜೈಲು ಸೇರಿದರು.40,000ಕೋಟಿ ಅಕ್ರಮ ಸಂಪತ್ತನ್ನು ಗಳಿಸಿರುವ ಜಗನ್ ಕೂಡ ಶಶಿಕಲಾ ಅವರಂತೆ ಜೈಲಿಗೆ ಹೋಗಲಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.
 
ದಿವಂಗತ ಜಯಲಲಿತಾ ಮತ್ತು ಅವರ ಆಪ್ತ ಸಖಿ ಶಶಿಕಲಾ ನಟರಾಜನ್ ಅವರ ಅಕ್ರಮ ಆಸ್ತಿ ಗಳಿಕೆಯನ್ನು ವಿರೋಧ ಪಕ್ಷದ ನಾಯಕ ಜಗನ್ ಅವರಿಗೂ ಹೋಲಿಸಿದ ಅವರು, ಈ ಕುರಿತು ತ್ವರಿತ ತನಿಖೆಯಾಗಬೇಕೆಂದು ಒತ್ತಾಯಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಟಿಡಿಪಿ ವಕ್ತಾರ ಎಸ್. ಚಿದಂಬರಮ್ ರೆಡ್ಡಿ ಸಹ ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು. ಶಶಿಕಲಾ ಜಯಲಲಿತಾ ಅವರ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಸಂಪತ್ತಿನ ಒಡತಿಯಾದರು. ಅವರಂತೆ ಜಗನ್ ಕೂಡ 2004ರಿಂದ 2009ರ ಅವಧಿಯಲ್ಲಿ ತನ್ನ ತಂದೆ, ಮಾಜಿ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಸಂಪತ್ತನ್ನು ಜಮಾ ಮಾಡಿದ್ದಾರೆ ಎಂದು ಆರೋಪಿಸಿದರು.
 
66ಕೋಟಿಗಾಗಿ ಶಶಿಕಲಾಗೆ ನಾಲ್ಕು ವರ್ಷ ಜೈಲಾಗಿದೆ, ಆದರೆ 1ಲಕ್ಷ ಕೋಟಿ ಅಕ್ರಮ ಆಸ್ತಿ ಒಡೆಯನಾಗಿರುವ ಜಗನ್‌ಗೆ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಯಾಗಲಿ ಎಂದು ಅವರು ಆಶಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಂದ್ರಾ ಟ್ರಾಕ್ಟರ್ ಆಪ್ ಬಿಡುಗಡೆ