Select Your Language

Notifications

webdunia
webdunia
webdunia
webdunia

ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ವಿಷ್ಣುವಿನ 11ನೇ ಅವತಾರವಂತೆ..

ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ವಿಷ್ಣುವಿನ 11ನೇ ಅವತಾರವಂತೆ..
ಚೆನ್ನೈ , ಗುರುವಾರ, 15 ಜೂನ್ 2017 (16:37 IST)
ಚೆನ್ನೈ:ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರು ವಿಷ್ಣುವಿನ 11ನೇ ಅವತಾರ ಎಂದು ಎಐಎಡಿಎಂಕೆ ಶಾಸಕ ಮರಿಯಪ್ಪನ್ ಕೆನ್ನೆಡಿ ಹೇಳಿದ್ದಾರೆ.
 
ತಮಿಳುನಾಡು ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮರಿಯಪ್ಪನ್ ಅವರು, ಜಯಲಲಿತಾ ಅವರು ವಿಷ್ಣುವಿನ 11ನೇ ಅವತಾರವಾಗಿದ್ದಾರೆ. ಅಲ್ಲದೇ ಅವರ ಸ್ಥಾನವನ್ನು ಜೈಲು ಪಾಲಾಗಿರುವ ಅವರ ಆಪ್ತೆ ವಿ.ಕೆ.ಶಶಿಕಲಾ ಅಲಂಕರಿಸಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ದಾರಿ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
 
ಮರಿಯಪ್ಪನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಡಿಎಂಕೆ ನಾಯಕರು, ಎಐಎಡಿಎಂಕೆ ಶಾಸಕನ ಹೇಳಿಕೆಯನ್ನು ಕಡತಗಳಿಂದ ತೆಗೆದು ಹಾಕುವಂತೆ ಸ್ಪೀಕರ್ ಪಿ ಧನಪಾಲ್ ಅವರನ್ನು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿ.ಎಸ್.ಉಗ್ರಪ್ಪ ವಿರುದ್ಧ ರಾಜ್ಯ ಉಸ್ತುವಾರಿಗೆ ದೂರು