Daily Horoscope

Select Your Language

Notifications

webdunia
webdunia
webdunia
webdunia

ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ

ಐಟಿ ರಿಟರ್ನ್ಸ್
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನ ಕೇಂದ್ರ ತೆರಿಗೆ ಇಲಾಖೆ ಆಗಸ್ಟ್ 5ರವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದೇ ಕೊನೆಯ ದಿನವಾಗಿತ್ತು. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲವೆಂದು ಇಲಾಖೆಯೇ ಸ್ಪಷ್ಟಪಡಿಸಿತ್ತು. ಆದರೆ, ರಿಟರ್ನ್ಸ್ ಸಲ್ಲಿಸುವ ವೆಬ್ ಸೈಟ್`ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.
 

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದೇ ಕೊನೆಯ ದಿನವಾಗಿತ್ತು. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲವೆಂದು ಇಲಾಖೆಯೇ ಸ್ಪಷ್ಟಪಡಿಸಿತ್ತು. ಆದರೆ, ರಿಟರ್ನ್ಸ್ ಸಲ್ಲಿಸುವ ವೆಬ್ ಸೈಟ್`ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.

ಐಟಿ ರಿಟರ್ನ್ಸ್ ಸಲ್ಲಿಸುವ ಭಾರತ ಸರ್ಕಾರದ  incometaxindiaefiling.gov.in and cleartax.in/income-tax-efiling ವೆಬ್ ಸೈಟ್`ಗಳಲ್ಲಿ ತಾಂತ್ರಕ ದೋಷ ಕಂಡುಬಂದಿದೆ. ಕೊನೆಯ ದಿನವಾದ ಇಂದು ಐಟಿ ರಿಟರ್ನ್ಸ್ ಸಲ್ಲಿಸಲು ಉಂಟಾದ ಜನಜಂಗುಳಿಯಿಂದ ಈ ತೊಡಕು ಉಂಟಾಗಿರಬಹುದೆಂದು ಹೇಳಲಾಗಿದೆ.

ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್-16, ಬ್ಯಾಂಕ್ ಖಾತೆ ಸಂಖ್ಯೆ, ಹೂಡಿಕೆ ಮತ್ತು ಸಂಬಳದ ಮಾಹಿತಿ ಅಗತ್ಯವಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್ ಕಡ್ಡಾಯವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರಕಾರದಿಂದ ಬರಪರಿಹಾರ ಹಣ ಬಿಡುಗಡೆ