Select Your Language

Notifications

webdunia
webdunia
webdunia
webdunia

ಚೆನ್ನೈನಲ್ಲಿ ಐಟಿ ರೈಡ್: 90 ಕೋಟಿ ನಗದು 100 ಕೆಜಿ ಚಿನ್ನ ವಶ

ಚೆನ್ನೈನಲ್ಲಿ ಐಟಿ ರೈಡ್: 90 ಕೋಟಿ ನಗದು 100 ಕೆಜಿ ಚಿನ್ನ ವಶ
ಚೆನ್ನೈ , ಗುರುವಾರ, 8 ಡಿಸೆಂಬರ್ 2016 (17:09 IST)
ನಗರದ ಎಂಟು ಪ್ರದೇಶಗಳಲ್ಲಿ ಆದಾಯ ತೆರಿಗೆ ಆಧಿಕಾರಿಗಳು ದಾಳಿ ನಡೆಸಿ 90 ಕೋಟಿ ನಗದು ಮತ್ತು 100 ಕೆಜಿ ಚಿನ್ನಾಭರಣ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ತಿರುಪತಿ ತಿರುಮಲ ದೇವಸ್ಥಾನಂ ಸಮಿತಿ ಸದಸ್ಯ ಶೇಖರ್ ರೆಡ್ಡಿ ಅವರ ಆಪ್ತ ಶ್ರೀನಿವಾಸ್ ರೆಡ್ಡಿ ಮತ್ತು ಪ್ರೇಮ್ ರೆಡ್ಡಿ ನಿವಾಸಗಳ ಮೇಲೆ ದಾಳಿ ಮಾಡಿದ ಅದಾಯ ತೆರಿಗೆ ಅಧಿಕಾರಿಗಳು 2000 ಮುಖಬೆಲೆಯ 70 ಕೋಟಿ ನಗದು ಹಣ ಪತ್ತೆಯಾಗಿರುವುದು ದಂಗುಬಡಿಸಿದೆ.
 
ಆರೋಪಿಗಳ ಬಳಿ 2000 ಮುಖಬೆಲೆಯ 70 ಕೋಟಿ ನಗದು ಹಣ ಎಲ್ಲಿಂದ ಬಂತು ಯಾವ ಬ್ಯಾಂಕ್ ಹಣ ನೀಡಿದೆ ಎನ್ನುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಇದೀಗ ಒಂದೊಂದು ಆಘಾತಕಾರಿ ಅಂಶಗಳು ಬಹಿರಂಗವಾಗುತ್ತಿವೆ.
 
ಚೆನ್ನೈನ ಪ್ರಮುಖ ವಾಣಿಜ್ಯ ಕೇಂದ್ರವಾದ ಟಿ ನಗರದ ನಾಲ್ಕು ಕಡೆಗಳಲ್ಲಿ, ಅಣ್ಣಾ ನಗರದ ನಾಲ್ಕು ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಭಾರಿ ಮೊತ್ತದ ಕಪ್ಪು ಹಣವನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ರಾಷ್ಟ್ರಗೀತೆ ಹಾಡಬಲ್ಲರೇ ?