Select Your Language

Notifications

webdunia
webdunia
webdunia
webdunia

ಮಾನವೀಯತೆ ಪದದ ಅರ್ಥ ಗೊತ್ತಿಲ್ಲದವರು ಇಸ್ರೇಲಿಗರು: ಆಕ್ರೋಶ ಹೊರಹಾಕಿದ ಪ್ರಿಯಾಂಕಾ ಗಾಂಧಿ

Congress MP Priyanka Gandhi Vadra

Sampriya

ನವದೆಹಲಿ , ಬುಧವಾರ, 19 ಮಾರ್ಚ್ 2025 (19:26 IST)
Photo Courtesy X
ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಇಸ್ರೇಲ್ ಸರ್ಕಾರವನ್ನು ಟೀಕಿಸಿದ್ದಾರೆ, "400 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ ನಾಗರಿಕರ ಕ್ರೂರ ಹತ್ಯೆ ಸಂಬಂಧ ಆಕ್ರೋಶ ಹೊರಹಾಕಿದ ಪ್ರಿಯಾಂಕಾ ಗಾಂಧಿ ವಾದ್ರಾ ಇಸ್ರೇಲ್‌ನವರಲ್ಲಿ ಮಾನವೀಯತೆಗೆ  ಯಾವುದೇ ಬೆಲೆ ಇಲ್ಲ ಎಂದು ಈ ಮೂಲಕ ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

ಅವರ ಈ ರೀತಿಯ ವರ್ತನೆಯಿಂದ ತಮ್ಮನ್ನು ತಾವು ಹೇಡಿಗಳಂತೆ ಬಹಿರಂಗಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

X ನಲ್ಲಿ ಪೋಸ್ಟ್ ಹಂಚಿಕೊಂಡ ವಯನಾಡ್ ಸಂಸದೆ ಪ್ರಿಯಾಂಕಾ, "ಇಸ್ರೇಲ್ ಸರ್ಕಾರದಿಂದ 130 ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಮುಗ್ಧ ನಾಗರಿಕರ ಕ್ರೂರ ಹತ್ಯೆಯಾಗಿದೆ. ಈ ಮೂಲಕ ಅವರಿಗೆ
ಮಾನವೀಯತೆ ಎಂದರೆ ಏನೆಂಬುದು ತಿಳಿದಿಲ್ಲ. ಅವರ ಕ್ರಿಯೆಗಳು ಅಂತರ್ಗತ ದೌರ್ಬಲ್ಯ ಮತ್ತು ತಮ್ಮದೇ ಆದ ಸತ್ಯವನ್ನು ಎದುರಿಸಲು ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತವೆ."

'ಇಸ್ರೇಲ್ ನರಮೇಧವನ್ನು ಪಾಶ್ಚಿಮಾತ್ಯ ಶಕ್ತಿಗಳು ಬೆಂಬಲಿಸಿದರೂ ಆತ್ಮಸಾಕ್ಷಿ ಹೊಂದಿರುವ ಜಗತ್ತಿನ ಎಲ್ಲ ನಾಗರಿಕರು ಖಂಡಿಸುತ್ತಾರೆ. ಈ ದಾಳಿಯು ದೌರ್ಬಲ್ಯ ಮತ್ತು ಸತ್ಯವನ್ನು ಎದುರಿಸುವಲ್ಲಿ ಇಸ್ರೇಲ್ ಅಸಮರ್ಥತೆಯನ್ನು ತೋರಿಸುತ್ತದೆ' ಎಂದು ಪ್ರಿಯಾಂಕಾ ಹೇಳಿದ್ದಾರೆ.

'ಇಸ್ರೇಲ್ ಸರ್ಕಾರ ಕ್ರೂರವಾಗಿ ವರ್ತಿಸಿದಷ್ಟು ನಿಜಕ್ಕೂ ಹೇಡಿತನವನ್ನು ಬಹಿರಂಗಪಡಿಸುತ್ತದೆ. ಮತ್ತೊಂದೆಡೆ ಪಾಲೆಸ್ಟೀನಿಯರ ಧೈರ್ಯ ಮೇಲುಗೈ ಸಾಧಿಸುತ್ತದೆ. ಅವರು ಊಹಿಸಲು ಸಾಧ್ಯವಾಗದಷ್ಟು ನೋವನ್ನು ಸಹಿಸಿಕೊಂಡಿದ್ದಾರೆ. ಅವರ ಛಲ ಅಚಲವಾಗಿ ಉಳಿದಿದೆ. ಸತ್ಯಮೇವ ಜಯತೇ' ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಬಜೆಟ್ಟೂ ನಂದೇ ಎಂದು ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್ ಮೀಟಿಂಗ್