Publish Date: Thu, 21 Apr 2016 (21:25 IST)
Updated Date: Thu, 21 Apr 2016 (21:31 IST)
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಜತೆ ತಾವು ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮಾಡಿದ್ದಾಗಿಯೂ, ಅದಕ್ಕೆ ಪ್ರತಿಯಾಗಿ ಉಗ್ರಗಾಮಿಗಳು ತಮಗೆ ತಲೆ ಕತ್ತರಿಸಿದ ಚಿತ್ರವನ್ನು ಕಳಿಸುವ ಮೂಲಕ ಶಾಂತಿ ಮಾತುಕತೆ ಧಿಕ್ಕರಿಸಿದ್ದಾರೆ ಎಂದು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರುವಾರ ತಿಳಿಸಿದರು.
ತ್ರಿಪುರಾಗೆ ಮೂರು ದಿನಗಳ ಪ್ರವಾಸ ಮಾಡಿದ್ದ ರವಿಶಂಕರ್ ಗುರುವಾರ ಕೋಲ್ಕತ್ತಾಗೆ ತೆರಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳಿಗೆ ಶಾಂತಿ ಮಾತುಕತೆ ಅಗತ್ಯವಿಲ್ಲವೆಂದು ಕಾಣುತ್ತದೆ. ಆದ್ದರಿಂದ ಅವರನ್ನು ಮಿಲಿಟರಿಯೇ ಬಗ್ಗುಬಡಿಯಬೇಕು ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದರು.
ಐಎಸ್ ಉಗ್ರರ ಹಿಂಸಾಚಾರದ ಅಭಿಯಾನಕ್ಕೆ ತಡೆಹಾಕಿ ಅವರ ಮನಸ್ಸನ್ನು ಪರಿವರ್ತಿಸಲು ತಮ್ಮ ಆಧ್ಯಾತ್ಮದ ತೇಜಸ್ಸನ್ನು ಬಳಸಲು ರವಿಶಂಕರ್ ಯೋಜಿಸಿದ್ದು ಠುಸ್ಸಾಗಿದೆ.