Select Your Language

Notifications

webdunia
webdunia
webdunia
webdunia

ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?

ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?
ನವದೆಹಲಿ , ಶುಕ್ರವಾರ, 7 ಅಕ್ಟೋಬರ್ 2022 (08:22 IST)
ನವದೆಹಲಿ : ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು ಎಂಬ ಜನಸಂಖ್ಯಾ ನಿಯಂತ್ರಣಾ ನೀತಿ ಜಾರಿಗೆ ಬರುತ್ತಾ? ಎಲ್ಲಾ ಸಮುದಾಯಗಳಿಗೂ ಈ ನಿಯಮ ಅನ್ವಯ ಆಗುತ್ತಾ ಎಂಬ ಚರ್ಚೆ ಜೋರಾಗುತ್ತಿದೆ.

ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ವಿಜಯದಶಮಿಯಂದು ನಾಗಪುರದ  ಕಚೇರಿಯಲ್ಲಿ ಬುಧವಾರ ಮಾತನಾಡುತ್ತಾ, ದೇಶದಲ್ಲಿ ಜನಸಂಖ್ಯಾ ನೀತಿ ಅವಶ್ಯಕತೆ ಇದೆ.

ಧರ್ಮ ಆಧಾರಿತ ಜನಸಂಖ್ಯೆಯ ಅಸಮತೋಲವನ್ನು ಇನ್ನು ನಿರ್ಲಕ್ಷಿಸಲಾಗದು. ಜನಸಂಖ್ಯಾ ಅಸಮತೋಲನ ದೇಶ ವಿಭಜನೆಗೆ ಕಾರಣವಾದೀತು ಅಂತ ಆತಂಕ ವ್ಯಕ್ತಪಡಿಸಿದ್ದರು.

ಮೋಹನ್ ಭಾಗವತ್ ಹೇಳಿಕೆಯ ಬೆನ್ನಲ್ಲೇ ಜನಸಂಖ್ಯಾ ನೀತಿ ಜಾರಿ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾಗವತ್ ಹೇಳಿಕೆಯನ್ನು ಎಂಐಎಂನ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಜನಸಂಖ್ಯಾ ನಿಯಂತ್ರಣದ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣದ ಹೆಸರಿನಲ್ಲಿ ಶಂಕಿತ PFI ನಾಯಕರು ಪರಾರಿ?