Select Your Language

Notifications

webdunia
webdunia
webdunia
webdunia

ಮುಂಬೈ ಮಹಿಳೆಯರಿಗೆ ಸುರಕ್ಷಿತವಲ್ಲ.‌.!

Mumbai
ಮುಂಬೈ , ಬುಧವಾರ, 16 ನವೆಂಬರ್ 2016 (10:10 IST)
ಮುಂಬೈ: ದೇಶದ ವಾಣಿಜ್ಯ ನಗರಿ ಖ್ಯಾತಿಯ ಮುಂಬೈ ಮಹಿಳೆಯರಿಗೆ ಅಸುರಕ್ಷಿತ ನಗರ ಎನ್ನುವ ಮಾಹಿತಿ ತಿಳಿದು ಬಂದಿದೆ.

ದೇಶದ ಪ್ರಮುಖ ವ್ಯವಹಾರಗಳು ಮುಂಬೈನಲ್ಲಿ ನಡೆಯುತ್ತಿದ್ದು, ಸಾಕಷ್ಟು ಜನರು ಅಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಅವರಲ್ಲಿ ಮಹಿಳೆಯರು ಸಹ ಅಪಾರ ಸಂಖ್ಯೆಯಲ್ಲಿದ್ದಾರೆ. ಈ ನಗರಿಯಲ್ಲಿ ಮಹಿಳಾ ಸುರಕ್ಷತೆ ಹಾಗೂ ಅಪರಾಧ ಕೃತ್ಯಗಳು ಹೇಗಿದೆ ಎಂದು ಸ್ವಯಂ ಸೇವಾ ಸಂಸ್ಥ್ಎ ಪ್ರಜಾ ಫೌಂಡೇಶನ್ ಆರ್'ಟಿಐ ಮೂಲಕ ಪೊಲೀಸರಿಂದ ಮಾಹಿತಿ ಕೇಳಿತ್ತು. ಕಳೆದ 5 ವರ್ಷಗಳಿಂದ ಶೇ. 28ರಷ್ಟು ಅಪರಾಧ ಚಟುವಟಿಕೆ ಹಾಗೂ ಶೇ. 29ರಷ್ಟು ಲೈಂಗಿಕ ಕಿರುಕುಳ ಜಾಸ್ತಿಯಾಗಿದೆ ಎಂದು ತಿಳಿದು ಬಂದಿದೆ.
 
ಶೇ.33 ರಷ್ಟು ಮಹಿಳೆಯರು ಹಾಗೂ ಮಕ್ಕಳಿಗೆ ಮುಂಬೈ ಸುರಕ್ಷಿತ ನಗರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 2015ರಲ್ಲಿ 712 ಪ್ರಕರಣಗಳು, 2014 ರಲ್ಲಿ 609 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿವೆ. 2015-16 ರಲ್ಲಿ ಅತ್ಯಾಚಾರ ಪ್ರಕರಣಗಳು ಶೇ.13 ಹಾಗೂ ಲೈಂಗಿಕ ಕಿರುಕುಳಗಳು ಶೇ.28 ಹೆಚ್ಚಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿರ್ಲಾದಿಂದ ಮೋದಿ ಲಂಚ ಸ್ವೀಕಾರ: ಕೇಜ್ರಿವಾಲ್