Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ಮಗಳ ಕೊಂದವಳು ಆಸ್ತಿ ದಾನ ಮಾಡುತ್ತಾಳಂತೆ

ಆಸ್ತಿಗಾಗಿ ಮಗಳ ಕೊಂದವಳು ಆಸ್ತಿ ದಾನ ಮಾಡುತ್ತಾಳಂತೆ
ನವದೆಹಲಿ , ಶುಕ್ರವಾರ, 23 ಡಿಸೆಂಬರ್ 2016 (12:53 IST)
ದೇಶಾದ್ಯಂತ ಸಂಚಲನ ಮೂಡಿಸಿದ ಶೀನಾ ಬೋರಾ ಹತ್ಯೆ ಹಿಂದಿನ ಕಾರಣ ಆಸ್ತಿ ಎನ್ನುತ್ತದೆ ಸಿಬಿಐ ಪ್ರಾಥಮಿಕ ವರದಿ. ಆದರೆ ಹಣಕ್ಕಾಗಿ ಹಡೆದ ಮಗಳನ್ನೇ ಕೊಂದ ತಾಯಿ ಇಂದ್ರಾಣಿ ಮುಖರ್ಜಿ ಈಗ ಅದೇ ಹಣವನ್ನು ದಾನ ಮಾಡಲು ಹೊರಟಿದ್ದಾಳೆ ಅಂದರೆ ನಂಬುತ್ತೀರಾ?

ಕಳೆದ 15 ತಿಂಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಇಂದ್ರಾಣಿ, ತಮ್ಮ ಆಸ್ತಿಯಲ್ಲಿ 75% ದಾನ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ ದೇಹದ ಅಂಗಾಂಗಳನ್ನು ಅವರು ದಾನ ಮಾಡುತ್ತಾರಂತೆ. 
 
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ಮುಗಿದ ಮೇಲೆ ತಾವು ಎರಡು ಮನವಿ ಮಾಡಿಕೊಳ್ಳುವುದಿದೆ ಎಂದು ಇಂದ್ರಾಣಿ  ಕೈ ಮೇಲೆತ್ತಿದ್ದಾರೆ. ಅನುಮತಿ ನೀಡಿದ ಬಳಿಕ ನಾನು 15 ತಿಂಗಳಿಂದ ಜೈಲಿನಲ್ಲಿದ್ದೇನೆ. ಸಹಕೈದಿಗಳು ಕಷ್ಟವನ್ನು ನೋಡಿ ಮರುಗಿದ್ದೇನೆ. ನನಗೆ ಯಾವುದೇ ಆಸ್ತಿ ಬೇಕಿಲ್ಲ. ನನ್ನ ಆಸ್ತಿಯ 75ರಷ್ಟನ್ನು ದಾನ ಮಾಡಲು ಬಯಸುತ್ತೇನೆ. ಸತ್ತ ಮೇಲೆ ಅಂಗದಾನವನ್ನು ಮಾಡ ಬಯಸುತ್ತೇನೆ ಎಂದಿದ್ದಾರೆ.
 
ನಿಮ್ಮ ಈ ವೈಯಕ್ತಿಕ ನಿರ್ಧಾರಕ್ಕೆ ಕೋರ್ಟ್ ಅನುಮತಿ ಬೇಕಿಲ್ಲ ಎಂದು ನ್ಯಾಯಾಧೀಶರೆಂದಾಗ ನಾನು ಕೋರ್ಟ್ ಕಸ್ಟಡಿಯಲ್ಲಿರುವುದರಿಂದ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾಳೆ ಇಂದ್ರಾಣಿ.
 
ನನ್ನ ಆಸ್ತಿಯನ್ನು ಇಸ್ಕಾನ್ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ದಾನ ಮಾಡುವುದಾಗಿ ಅವರು ಹೇಳಿದ್ದಾರೆ.
 
ಎರಡನೆಯದಾಗಿ, ತೀರ್ಪು ಏನೆಂದು ಬರಲಿದೆ ಎಂದು ನನಗೆ ತಿಳಿದಿಲ್ಲ. ನನಗೆ ನೇಣಾಗಬಹುದು, ಜೀವಾವಧಿಯಾಗಬಹುದು ಅಥವಾ ಖುಲಾಸೆಯಾಗಬಹುದು. ಏನೇ ಆಗಲಿ ನಾನು ನನ್ನ ಅಂಗದಾನ ಮಾಡಲು ಬಯಸುತ್ತೇನೆ ಎಂದಿದ್ದಾರೆ ಇಂದ್ರಾಣಿ. 
 
ನೀವು ಕೂಡ ಅಂಗದಾನ ಮಾಡುತ್ತೀರಾ ಎಂದು ಇಂದ್ರಾಣಿ ಮುಖರ್ಜಿ ಪತಿ, ಮಾಜಿ ಮಾಧ್ಯಮ ದೊರೆ ಪೀಟರ್ ಮುಖರ್ಜಿ ಅವರನ್ನು ಕೇಳಲಾಗಿ ನನ್ನ ದೇಹದ ಅಂಗಗಳೆಲ್ಲ ಚೆನ್ನಾಗಿವೆ, ದಾನ ಮಾಡುವ ಉದ್ದೇಶ ನನಗಿಲ್ಲ ಎಂದುತ್ತರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈಗೆ ಯಾವ ನೈತಿಕತೆ ಇದೆ: ಸಿಎಂ ಸಿದ್ದರಾಮಯ್ಯ