Select Your Language

Notifications

webdunia
webdunia
webdunia
webdunia

ಇಂದೋರ್- ಪಾಟ್ನಾ ರೈಲು ದುರಂತ: 133 ಪ್ರಯಾಣಿಕರು ಸಾವು

ಇಂದೋರ್- ಪಾಟ್ನಾ ರೈಲು ದುರಂತ: 133 ಪ್ರಯಾಣಿಕರು ಸಾವು
ಕಾನ್ಪುರ್ , ಸೋಮವಾರ, 21 ನವೆಂಬರ್ 2016 (13:15 IST)
ಇಂದೋರ್‌‍ನಿಂದ ಪಾಟ್ನಾಗೆ ತೆರಳುತ್ತಿದ್ದ ರೈಲು ಭೀಕರ ಅಪಘಾತಕ್ಕೊಳಗಾಗಿದ್ದರಿಂದ ಘಟನೆಯಲ್ಲಿ 133 ಪ್ರಯಾಣಿಕರ ಸಾವನ್ನಪ್ಪಿದ್ದು ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಐದು ಎನ್‌ಡಿಆರ್‌ಎಫ್ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
 
ನಿನ್ನೆ ರಾತ್ರಿ 3 ಗಂಟೆಗೆ ಘಟನೆ ಸಂಭವಿಸಿದ್ದು ಸ್ಲೀಪರ್‌ ಬೋಗಿಗಳಲ್ಲಿದ್ದ ಪ್ರಯಾಣಿಕರಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ. ಹಲವಾರು ಪ್ರಯಾಣಿಕರು ಇನ್ನೂ ರೈಲ್ವೆ ಬೋಗಿಗಳಲ್ಲಿ ಸಿಲುಕಿದ್ದಾರೆ. ಅವರನ್ನು ಉಳಿಸುವ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. 
 
ಎಸ್‌1 ಎಸ್‌2 ಮತ್ತು ಎಸ್‌3, ಎಸ್‌4 ಕೋಚ್‌ಗಳು ತುಂಬಾ ಹಾನಿಗೊಳಗಾಗಿದ್ದು, ಎಸಿ ಕೋಚ್‌ನಲ್ಲಿರುವ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ರೈಲು ಅಪಘಾತದಲ್ಲಿ ಮೃತಪಟ್ಟ 62 ಪ್ರಯಾಣಿಕರನ್ನು ಗುರುತಿಸಲಾಗಿದ್ದು, 20 ಪ್ರಯಾಣಿಕರು ಉತ್ತರಪ್ರದೇಶಕ್ಕೆ ಸೇರಿದವರಾಗಿದ್ದಾರೆ 15 ಪ್ರಯಾಣಿಕರು ಮಧ್ಯಪ್ರದೇಶ, 6 ಪ್ರಯಾಣಿಕರು ಬಿಹಾರ್ ಮತ್ತು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ತಲಾ ಒಬ್ಬ ಪ್ರಯಾಣಿಕರು ಸೇರಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ: 300ಕ್ಕೂ ಹೆಚ್ಚಿನ ರೈತರ ಬಂಧನ