Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಭಾರತ ಮೂಲದ ತಾಯಿ-ಮಗು ಅನುಮಾನಾಸ್ಪದ ಸಾವು

ಅಮೆರಿಕದಲ್ಲಿ ಭಾರತ ಮೂಲದ ತಾಯಿ-ಮಗು ಅನುಮಾನಾಸ್ಪದ ಸಾವು
ನ್ಯೂಜೆರ್ಸಿ , ಶುಕ್ರವಾರ, 24 ಮಾರ್ಚ್ 2017 (12:55 IST)
ಭಾರತ ಮೂಲದ ಮಹಿಳೆ ಮತ್ತು 7 ವರ್ಷದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನ್ಯೂ ಜೆರ್ಸಿಯಲ್ಲಿ ನಡೆದಿದೆ. 40 ವರ್ಷದ ಎನ್ ಶಶಿಕಲಾ ಮತ್ತು ಅನೀಶ್ ಸಾಯಿ ಮೃತ ದುರ್ದೈವಿಗಳು. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿರುವ ಶಶಿಕಲಾ ಕುಟುಂಬ ಈ ಬಗ್ಗೆ ಮಾಹಿತಿ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಗುರುವಾರ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಪತಿ ಎನ್. ಹನುಮಂತ ರಾವ್, ಪತ್ನಿ ಮತ್ತು ಮಗುವಿನ ಸಾವು ಕಂಡು ಕುಸಿದು ಬಿದ್ದಿದ್ದಾರೆ.

ಈ ಕುರಿತಂತೆ ಉತ್ತರ ಅಮೆರಿಕಾದ ತೆಲುಗು ಸಂಘಟನೆ ಜೊತೆ ಮಾತನಾಡಿರುವ ಸ್ಥಳೀಯ ಶಾಸಕ ವೈ. ಸಾಂಭಶಿವರಾವ್, ಶಶಿಕಲಾ ಮತ್ತು ಮಗುವನ್ನ ಕುತ್ತಿಗೆ ಬಿಗಿದು ಕೊಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಹನುಮಂತರಾವ್ ಮತ್ತು ಶಶಿಕಲಾ ಇಬ್ಬರು ಸಾಫ್ಟ್`ವೇರ್ ಇಂಜಿನಿಯರ್`ಗಳಾಗಿದ್ದು, 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದಾರೆ. ಶಶಿಕಲಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.

ಅಮೆರಿಕದಲ್ಲಿ ಭಾರತೀಯರ ಸಾವು ನಿಜಕ್ಕೂ ಭಯದ ವಾತಾವರಣ ಹುಟ್ಟಿಸಿದೆ. ಕನ್ಸಾಸ್`ನಲ್ಲಿ ಇಂಜಿನಿಯರ್ ಶ್ರೀನಿವಾಸ್ ಹತ್ಯೆ, ಫೆಬ್ರವರಿ10ರಂದು ಕ್ಯಾಲಿಫೋರ್ನಿಯಾದಲ್ಲಿ ವಂಶೀ ರೆಡ್ಡಿ ಹತ್ಯೆ, ಹಲವೆಡೆ ಭಾರತೀಯರ ಮೇಲಿನ ಗುಂಡಿನ ದಾಳಿಗಳ ಬಳಿಕ ಇದೀಗ ತಾಯಿ-ಮಗುವಿನ ಅನುಮಾನಾಸ್ಪದ ಸಾವು ಅನಿವಾಸಿ ಭಾರತೀಯರ ನಿದ್ದೆಗೆಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಂ ಕೃಷ್ಣರನ್ನು ಟೀಕಿಸಲು ಹೋಗಿ ತಾವೇ ಪೆಚ್ಚಾದ ಮಲ್ಲಿಕಾರ್ಜುನ ಖರ್ಗೆ!