Select Your Language

Notifications

webdunia
webdunia
webdunia
webdunia

ಪಾಕ್‌ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಭಾರತೀಯ ಸೈನಿಕನಿಗೆ ಜೀವ ಬೆದರಿಕೆ

ಪಾಕ್‌ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಭಾರತೀಯ ಸೈನಿಕನಿಗೆ ಜೀವ ಬೆದರಿಕೆ
ನವದೆಹಲಿ , ಮಂಗಳವಾರ, 11 ಅಕ್ಟೋಬರ್ 2016 (15:18 IST)
ಉರಿ ಸೇನಾನೆಲೆಯ ಮೇಲೆ ಪಾಕ್ ಪ್ರಚೋದಿತ ಕಾಶ್ಮೀರಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಾಕ್‌ಗೆ ತಿರುಗೇಟು ನೀಡಿ ಅಂತರ್ಜಾಲಜಲ್ಲಿ ದೇಶಭಕ್ತಿಯ ಪದ್ಯ ಹಾಡುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದ ಭಾರತೀಯ ಸೈನಿಕನಿಗೆ ಜೀವ ಬೆದರಿಕೆ ಬರುತ್ತಿದೆ. 
ಹಿಮಾಚಲ ಪ್ರದೇಶದಲ್ಲಿ ಮುಖ್ಯ ಪೇದೆಯಾಗಿರುವ ಮನೋಜ್ ಠಾಕೂರ್ ತಮಗೆ ಜೀವಬೆದರಿಕೆ ಇದೆ ಎಂದು ಫೇಸ್‌ಬುಕ್ ಸ್ಟೇಟಸ್ ಹಾಕಿದ್ದಾರೆ. (दोस्तों मुझे दुश्मनो की गीदड़ धमकिया मिल रही है ।। मुझे खुशी है की उनके खेमे में हाहाकार मचा हुआ है।एक सूअर का पिल्ला मुझे मारने की चाह मन में पाल बैठा है।। मुझे सौगन्ध है अपनी मातृभुमि की अपने उन शहीदो की, अगर कभी इन काफिरो से मेरा आमना सामना हुआ तो इतना कोहराम मचाऊँगा की इनकी नस्ल को तबाह कर दूँगा।। वन्देमातरम ।। जय हिंद।।जय हिंद की सेना ।।)
 
ಇಂತಹ ಬೆದರಿಕೆಗಳಿಗೆ ಅಂಜುವುದಿಲ್ಲ ಎಂದಿರುವ ಠಾಕೂರ್, ನನಗೆ ಮಾತೃಭೂಮಿ ತಮಗೆ ಬೆದರಿಕೆ ಹಾಕುವವರು ಎದುರಾದರೆ ಅವರ ರುಂಡ ಚೆಂಡಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. 
 
ತಮ್ಮ ಸಹೋದ್ಯೋಗಿಗಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತ ಠಾಕೂರ್, ವಿಶ್ವ ಹಿಂದೂ ಪರಿಷದ್‌ನ ಸಾಧ್ವಿ ಬಾಲಿಕಾ ಸರಸ್ವತಿ ವಿರಚಿತ 'ಕಾಶ್ಮೀರ್ ತೋ ಹೋಗಾ, ಪರ್ ಪಾಕಿಸ್ತಾನ್ ನಹೀಂ ಹೋಗಾ', ಎಂಬ ಪದ್ಯದ ಮೂಲಕ ಪಾಕಿಸ್ತಾನಕ್ಕೆ ಸವಾಲೆಸೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡಿತ್ತು. 
   
ಪಾಕ್‌ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಭಾರತೀಯ ಸೈನಿಕನಿಗೆ ಜೀವ ಬೆದರಿಕೆ
 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ: ಕರುಣಾ ನಿಧಿ