Select Your Language

Notifications

webdunia
webdunia
webdunia
webdunia

ರೈಲ್ವೆ ಇಲಾಖೆಯಿಂದ ಮತ್ತಷ್ಟು ಸುಲಭವಾಗಲಿದೆ ಪ್ರವಾಸೋದ್ಯಮ....

ರೈಲ್ವೆ ಇಲಾಖೆಯಿಂದ ಮತ್ತಷ್ಟು ಸುಲಭವಾಗಲಿದೆ ಪ್ರವಾಸೋದ್ಯಮ....
ನವದೆಹಲಿ , ಮಂಗಳವಾರ, 21 ಜೂನ್ 2016 (11:52 IST)
ಸಾರ್ವಜನಿಕರು ತಮ್ಮ ಸುಖಕರ ಪ್ರಯಾಣವನ್ನು ಗಂಭೀರವಾಗಿ ಪರಿಗಣಿಸಬಹುದು. ಆದರೆ, ಭಾರತೀಯ ರೈಲ್ವೆ ಪ್ರವಾಸಿಗರ ಹಿತ ವಹಿಸಲು ಸದಾ ಸಿದ್ಧವಿರುತ್ತದೆ ಎಂದು ಪ್ರಯಾಣಿಕರು ಮರೆಯಬಾರದು. ದೇಶದಲ್ಲಿ ಪ್ರವಾಸೋದ್ಯಮವನ್ನು ಬಲಪಡಿಸಲು ಭಾರತೀಯ ರೈಲ್ವೆ ಇಲಾಖೆ ಇತ್ತೀಚಿಗೆ ಸಾಕಷ್ಟು ಹೊಸ ಯೋಜನೆಗಳನ್ನು ರೂಪಿಸಿದೆ.

ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲೆಂದು ಭಾರತೀಯ ರೈಲ್ವೆ ಕೆಲವು ನಿಯಮಗಳಲ್ಲಿ ಬದಲಾವನೆ ಮಾಡಿದ್ದು, ನೂತನ ನಿಯಮಗಳು ಪ್ರಸಕ್ತ ಸಾಲಿನ ಜುಲೈ 1 ರಿಂದ ಜಾರಿಗೆ ಬರಲಿದೆ.
 
ಪ್ರವಾಸಿ ಜೀವನದಲ್ಲಿ ಹಠಾತ್ ಯೋಜನೆಗಳು ಸಾಮಾನ್ಯ. ಪ್ರಯಾಣಿಕರು ಮುಂಚಿತವಾಗಿಯೇ ಎಲ್ಲಾ ಯೋಜನೆಗಳನ್ನು ರೂಪಿಸುವುದು ಅಸಾಧ್ಯವೆ ಸರಿ. ಜುಲೈ 1 ರಿಂದ ಜಾರಿಗೆ ಬರುವ ಹೊಸ ನಿಯಮದ ಪ್ರಕಾರ, ಪ್ರಯಾಣಿಕರು ಬುಕ್ ಮಾಡಿರುವ ತತ್ಕಾಲ್ ಟಿಕೆಟ್ ಮೇಲೆ 50 ಪ್ರತಿಶತ ಹಣವನ್ನು ಮರುಪಾವತಿ ಪಡೆಯಬಹುದಾಗಿದೆ. 
 
ಸುವಿಧಾ ರೈಲುಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ವೆಟಿಂಗ್ ಲಿಸ್ಟ್ ಪರಿಕಲ್ಪನೆ ದೂರವಾಗಲಿದೆ. ಪ್ರಯಾಣಿಕರಿಗೆ ಕೇವಲ ದೃಢಪಡಿಸಿರುವ ಮತ್ತು ಆರ್‌ಎಸಿ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಈ ಪರಿಕಲ್ಪನೆಯಿಂದ ಅಗತ್ಯವಿದ್ದರೆ ಪ್ರಯಾಣಿಕರು ತಮ್ಮ ಪ್ರವಾಸಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ.
 
ಪ್ರವಾಸಿಗರಿಗೆ ಅನುಕೂಲವಾಗಲೆಂದು ರಾಜಧಾನಿ ಮತ್ತು ಶತಾಬ್ಧಿ ರೈಲುಗಳಲ್ಲಿ ಹೆಚ್ಚು ಬೋಗಿಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರ ಗರಿಷ್ಠ ಪ್ರಯಾಣ ಸಮಯದಲ್ಲಿ ಟಿಕೆಟ್ ಸುಲಭವಾಗಿ ದೊರೆಯುವುವ ಸಾಧ್ಯತೆಗಳನ್ನು ಹೆಚ್ಚಿಸಲಿದೆ.
 
ಐಆರ್‌ಸಿಟಿಸಿ ವಿವಿಧ ಭಾಷೆಗಳಲ್ಲಿ ಟಿಕೆಟ್ ಬುಕಿಂಗ್ ಪ್ರಾರಂಭಿಸುತ್ತಿದೆ. ಇದರಿಂದ ರೈಲ್ವೆ ಇಲಾಖೆಯಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರಯಾಸಿಗರನ್ನು ಆಕರ್ಷಿಸಲು ಸುಲಭವಾಗುತ್ತದೆ.
 
ಪ್ರಯಾಣಿಕರು ತಮ್ಮ ಗಮ್ಯಸ್ಥಾನ ಏಳುವ ಕರೆ ನೀಡುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ಗುರಿಯನ್ನು ಸರಿಯಾಗಿ ತಲುಪಲು ಸಹಕಾರಿಯಾಗುತ್ತದೆ. ಈ ಎಲ್ಲ ಹೊಸ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ರೈಲ್ವೆ ಇಲಾಖೆ ಪ್ರವಾಸೋದ್ಯಮವನ್ನು ಮತಷ್ಟು ಸುಲಭ ಮಾಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಪಕ್ಷಕ್ಕಿಂತ ದೊಡ್ಡವರಂತೆ ವರ್ತಿಸುತ್ತಿದ್ದಾರೆ: ವಿಶ್ವನಾಥ್ ಗುಡುಗು