Publish Date: Mon, 14 Aug 2017 (07:07 IST)
Updated Date: Mon, 14 Aug 2017 (07:09 IST)
ಬೀಜಿಂಗ್: ಭಾರತೀಯ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಚೀನಾದ ಏರ್ ಲೈನ್ಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಶಾಂಘೈ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಶಾಂಘೈ ಮತ್ತು ಚೀನಾ ವಿದೇಶಾಂಗ ಇಲಾಖೆ ಕಚೇರಿಗೆ ಭಾರತೀಯ ವಿದೇಶಾಂಗ ಸಚಿವೆ ಸಚಿವೆ ಸುಷ್ಮಾ ಸ್ವರಾಜ್ ಸೂಚನೆಯಂತೆ ದೂರು ದಾಖಲಿಸಿದೆ.
ಭಾರತೀಯ ಮೂಲದ ವ್ಯಕ್ತಿಯೊಬ್ಬ ನಿರ್ಗಮನದ ದ್ವಾರದಲ್ಲಿ ವೀಲ್ ಚೇರ್ ಪ್ರಯಾಣಿಕರನ್ನು ಕಳುಹಿಸುವಾಗ ಭಾರತೀಯ ಮೂಲದವರಿಗೆ ಅವಮಾನ ಮಾಡುತ್ತಿದ್ದರು ಎಂದು ಸಚಿವೆ ಸುಷ್ಮಾಗೆ ದೂರು ನೀಡಿದ್ದೆ.