Select Your Language

Notifications

webdunia
webdunia
webdunia
webdunia

96 ಗಂಟೆಗಳಲ್ಲಿ 13 ಉಗ್ರರ ಹತ್ಯೆ

Indian Army
ಶ್ರೀನಗರ , ಭಾನುವಾರ, 11 ಜೂನ್ 2017 (10:40 IST)
ಜಮ್ಮು: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕಳೆದ 96 ಗಂಟೆಗಳಲ್ಲಿ 13 ಮಂದಿ ಒಳನುಸುಳುಕೋರ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. 
 
ಗಡಿ ನಿಯಂತ್ರಣ ಪ್ರದೇಶವಾದ ಗುರೆಝ್, ಮಚಿಲ್, ನೌಗಮ್ ಮತ್ತು ಉರಿ ವಲಯದಲ್ಲಿ ಭಾರತೀಯ ಸೈನ್ಯದ ನಿರಂತರ ಕಾರ್ಯಾಚರಣೆಯಿಂದಾಗಿ ಒಳ ನುಸುಳುಕೋರರ ಗುಂಪನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ. ಇದರಿಂದ ಕಳೆದ 96 ಗಂಟೆಗಳಲ್ಲಿ 13 ಮಂದಿ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. 
 
ಗುರೆಝ್ ಮತ್ತು ಉರಿ ವಲಯದಲ್ಲಿ ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಐದು ಶಸ್ತ್ರಸಜ್ಜಿತ ಒಳನುಸುಳುಕೋರರನ್ನು ಉರಿ ವಲಯದಲ್ಲಿ ಕೊಲ್ಲಲಾಗಿದೆ. ಗಡಿ ನಿಯಂತ್ರಣ ರೇಖೆ ಹತ್ತಿರ ಗುರೇಝ್ ವಲಯದಲ್ಲಿ ಒರ್ವ ಉಗ್ರಗಾಮಿ ಹತನಾಗಿದ್ದಾನೆ. ಹಲವು ಉಗ್ರರ ಗುಂಪುಗಳ ಮೂಲಕ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ  ಪ್ರಚೋದನಕಾರಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಉದಂಪುರ್ ಕಮಾಂಡ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 16ರಂದು ಪೆಟ್ರೋಲ್ ಬಂಕ್ ಬಂದ್