ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿಯ ವಿಡಿಯೋ ತುಣುಕನ್ನು ಬಿಡುಗಡೆ ಮಾಡಲು
ಭಾರತೀಯ ಸೇನೆ ಕೇಂದ್ರ ಸರ್ಕಾರಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಪ್ರಧಾನಿ
ವಿಡಿಯೋ ಬಿಡುಗಡೆ ಮಾಡಲು ನಾವು ಉತ್ಸುಕರಾಗಿದ್ದು, ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ ಎನ್ನುತ್ತಿರುವವರಿಗೆ ಇದು ಉತ್ತರ ನೀಡಲಿದೆ ಎಂದು ಸೇನೆಯ ಉನ್ನತ ಅಧಿಕಾರಿಗಳು ಆಫ್ ದಿ ರೆಕಾರ್ಡ್ ಹೇಳಿದ್ದಾರೆ.
ಪಾಕಿಸ್ತಾನ ಸೀಮಿತ ದಾಳಿ ನಡೆದೇ ಇಲ್ಲ ಎಂದು ವಾದಿಸುತ್ತಿರುವ ಹಿನ್ನೆಲೆಯಲ್ಲಿ ಸಾಕ್ಷ್ಯವನ್ನು ತೋರಿಸಲು ವಿಡಿಯೋ ಬಿಡುಗಡೆ ಮಾಡುವಂತೆ ಶಿಫಾರಸ್ಸುಗಳು ವ್ಯಕ್ತವಾಗುತ್ತಿವೆ.
ಪಾಕಿಸ್ತಾನದ ಈ ಮೊಂಡುವಾದವನ್ನು ಮುಂದುವರೆಸುತ್ತಿದ್ದಂತೆ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಪಕ್ಷದ ಸಂಜಯ್ ನಿರುಪಮ್ ಸೇರಿದಂತೆ ಭಾರತದ ಕೆಲ ವಿರೋಧ ಪಕ್ಷದ ನಾಯಕರು ಸಹ ಸೀಮಿತ ದಾಳಿಗೆ ಸಾಕ್ಷ್ಯವನ್ನು ಕೇಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ