ಉರಿಸೋದು ಅಂದ್ರೆ ಇದು... ಊಟದ ಮೆನುವಿನಲ್ಲಿ ಪಾಕಿಸ್ತಾನವನ್ನು ಹುರಿದು ಮುಕ್ಕಿದ ಭಾರತೀಯ ಸೇನೆ

Krishnaveni K
ಗುರುವಾರ, 9 ಅಕ್ಟೋಬರ್ 2025 (14:32 IST)
ನವದೆಹಲಿ: ಎದುರಾಳಿಗಳನ್ನು ಉರಿಸೋದು ಅಂದ್ರೆ ಏನು ಎಂದು ಬಹುಶಃ ಭಾರತೀಯ ವಾಯುಸೇನೆಯನ್ನು ನೋಡಿ ಕಲಿಯಬೇಕು. ಇದಕ್ಕೆ ಸಾಕ್ಷಿ ಭಾರತೀಯ ವಾಯುಸೇನೆಯ ಊಟದ ಮೆನು.

ಭಾರತೀಯ ವಾಯುಸೇನೆಯ ಊಟದ ಮೆನುವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿರುವ ತಿಂಡಿ ಮತ್ತು ಸಿಹಿ ತಿನಿಸುಗಳ ಹೆಸರುಗಳನ್ನು ವಿಶೇಷವಾಗಿ ಹೆಸರಿಸಲಾಗಿದೆ. ಅದನ್ನು ನೋಡಿ ನೆಟ್ಟಿಗರು ಉರಿಸೋದು ಅಂದರೆ ಇದು ಎನ್ನುತ್ತಿದ್ದಾರೆ.

ಈ ಮೆನುವಿನಲ್ಲಿ ತಿಂಡಿಗಳ ಹೆಸರನ್ನು ಇತ್ತೀಚೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯು ಸೇನೆ ದಾಳಿ ನಡೆಸಿದ ಪಾಕಿಸ್ತಾನದ ತಾಣಗಳ ಹೆಸರನ್ನು ಸೇರಿಸಿ ಬರೆಯಲಾಗಿದೆ. ಅಂದರೆ  ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲ, ಬಹವಾಲ್ಪುರ ನಾನ್, ಸರ್ಗೋದಾ ದಾಲ್ ಮಖಾನಿ, ಸುಕ್ಕೂರ್ ಶಾಮ್ ಸವೇರಾ ಕೋಫ್ತಾ, ಬಾಲಾಕೋಟ್ ತಿರಮಿಸು, ಮುಝಾಫರಾಬಾದ್ ಕುಲ್ಫೀ ಇತ್ಯಾದಿ ಪಾಕಿಸ್ತಾನದ ಹೆಸರುಗಳನ್ನು ಇಡಲಾಗಿದೆ.

ಜೊತೆಗೆ ಮೆನುವಿನ ಮೇಲ್ಭಾಗದಲ್ಲಿ ಐಎಎಫ್ ಗೆ 93 ವರ್ಷ: ದೋಷರಹಿತ, ಪ್ರಭಾವಶಾಲೀ ಮತ್ತು ನಿಖರ’ ಎಂದು ಶೀರ್ಷಿಕೆಯನ್ನೂ ನೀಡಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಟಾಂಗ್ ಕೊಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments