Select Your Language

Notifications

webdunia
webdunia
webdunia
webdunia

ಭಾರತದಿಂದ ಸರ್ಜಿಕಲ್ ದಾಳಿ 2? ಸುಳಿವು ಕೊಟ್ಟ ಕೇಂದ್ರ ಸಚಿವ

ಭಾರತದಿಂದ ಸರ್ಜಿಕಲ್ ದಾಳಿ 2? ಸುಳಿವು ಕೊಟ್ಟ ಕೇಂದ್ರ ಸಚಿವ
NewDelhi , ಸೋಮವಾರ, 22 ಮೇ 2017 (09:06 IST)
ನವದೆಹಲಿ: ಕಾಶ್ಮೀರದ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ಅಂತಹದ್ದೊಂದು ಪರಿಣಾಮಕಾರಿ ಹೆಜ್ಜೆಯಿಡಲು ಕೇಂದ್ರ ಮುಂದಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

 
ಈ ಮೂಲಕ ಮತ್ತೊಂದು ಸರ್ಜಿಕಲ್ ದಾಳಿಯ ಸುಳಿವು ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಂದು ಸೀಮಿತ ದಾಳಿ ನಡೆಸಲು ಸರ್ಕಾರ ಯೋಜನೆ ರೂಪಿಸಿದೆಯೇನೋ ಎಂಬ ಅನುಮಾನಗಳು ಬಲವಾಗುತ್ತಿವೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ವಿರುದ್ಧ ಖಡಾ ಖಂಡಿತವಾಗಿ ದೊಡ್ಡ ಮಟ್ಟದ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಹೇಗೆ? ಯಾವಾಗ ಎನ್ನುವ ಪ್ರಶ್ನೆ ಕೇಳಬೇಡಿ. ಆ ಗುಟ್ಟು ಬಿಟ್ಟುಕೊಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಾಗಾಗಿ ಪದೇ ಪದೇ ಕೆಣಕುತ್ತಿರುವ ಪಾಕ್ ಉಗ್ರರಿಗೆ ತಕ್ಕ ಪಾಠ ಕಲಿಸಲು ಭಾರತ ಯಾವ ದಾರಿ ಅನುಸರಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮಾನವೀಯತೆ ಮೆರೆದ ಸಿಎಂ ಸಿದ್ಧರಾಮಯ್ಯ