ಜಗತ್ತಿನಲ್ಲಿ ರಕ್ಷಣಾ ವಲಯಕ್ಕೆ ಅತೀ ಹೆಚ್ಚಿನ ಹಣ ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿದ ಭಾರತ ಮೂರನೇ ಸ್ಥಾನಕ್ಕೇರಿದೆ.
ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೋಮವಾರ ರಕ್ಷಣೆಗೆ ಅತೀ ಹೆಚ್ಚು ಖರ್ಚು ಮಾಡುತ್ತಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಮೆರಿಕ, ಚೀನಾ ನಂತರ ಭಾರತ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.
ವಿಶ್ವ ಮಿಲಿಟರಿ ವೆಚ್ಚವು 2021 ರಲ್ಲಿ ಶೇ. 0.7 ಪ್ರತಿಶತದಷ್ಟು ಹೆಚ್ಚಾಗಿದ್ದು, ಜಗತ್ತಿನ ಒಟ್ಟಾರೆ ರಕ್ಷಣಾ ವೆಚ್ಚದ ಪೈಕಿ ಶೇ.62ರಷ್ಟು ವೆಚ್ಚವನ್ನು ಈ ಐದು ದೇಶಗಳೇ ವ್ಯಯಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಾರ್ವಕಾಲಿಕ ಗರಿಷ್ಠ ಅಂದರೆ 2.1 ಟ್ರಿಲಿಯನ್ ಡಾಲರ್ ಗೆ ತಲುಪಿದೆ. ಈ ಪೈಕಿ ಅತೀ ಹೆಚ್ಚು ರಕ್ಷಣಾ ವೆಚ್ಚ ಮೀಸಲಿಟ್ಟಿರುವುದು ಅಮೆರಿಕ ರಾಷ್ಟ್ರವಾಗಿದ್ದು, ನಂತರದ ಸ್ಥಾನದಲ್ಲಿ ಚೀನಾ ದೇಶವಿದೆ.
ಬ್ರಿಟನ್ ದೇಶವನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೇರಿದ್ದು, ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ 5ನೇ ಸ್ಥಾನದಲ್ಲಿದೆ.