Select Your Language

Notifications

webdunia
webdunia
webdunia
webdunia

ಹೈಸ್ಪೀಡ್ ಇಂಟರ್ ನೆಟ್ ಯುಗಕ್ಕೆ ಕಾಲಿಡಲಿರುವ ಭಾರತ-ಇಸ್ರೋ

ಹೈಸ್ಪೀಡ್ ಇಂಟರ್ ನೆಟ್ ಯುಗಕ್ಕೆ ಕಾಲಿಡಲಿರುವ ಭಾರತ-ಇಸ್ರೋ
ಇಸ್ರೋ , ಭಾನುವಾರ, 21 ಮೇ 2017 (12:08 IST)
ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಜೂನ್ ನಲ್ಲಿ ಜಿಎಸ್ಎಟಿ-19, ಜಿಎಸ್ಎ ಟಿ-11  ಹಾಗೂ ಜಿಎಸ್ಎಟಿ-20 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಈ ಮೂಲಕ ಭಾರತ ಹೈಸ್ಪೀಡ್ ಇಂಟರ್ ನೆಟ್ ನಲ್ಲಿ ಮತ್ತಷ್ಟು ಮೇಲ್ಮಟ್ಟಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ. 
 
 
ಇಂಟರ್ ನೆಟ್ ವೇಗದ ವಿಷಯಕ್ಕೆ ಬಂದಾಗ ಏಷ್ಯಾದ ಹಲವು ದೇಶಗಳಿಗೆ ಹೋಲಿಸಿದರೆ ಭಾರತ ಹಿಂದಿದ್ದು, ಇನ್ನು 18 ತಿಂಗಳಲ್ಲಿ ಈ ಪರಿಸ್ಥಿತಿ ಬದಲಾಗಲಿದೆ. ಇಸ್ರೋ ಉಡವಾಣೆ ಮಾಡಲಿರುವ ಮೂರು ಸಂವಹನ ಉಪಗ್ರಹಗಳ ಮೂಲಕ ಭಾರತ ಹೈಸ್ಪೀಡ್ ಇಂಟರ್ ನೆಟ್ ಯುಗಕ್ಕೆ ಕಾಲಿಡಲಿದೆ ಎಂದು ಹೇಳಿದ್ದಾರೆ.
 
ಒಮ್ಮೆ ಈ ಉಪಗ್ರಹಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ ಅತ್ಯುತ್ತಮ ಗುಣಮಟ್ಟದ ಇಂಟರ್ ನೆಟ್, ದೂರವಾಣಿ, ವಿಡಿಯೋ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಾಧವ್ ರಾಜತಾಂತ್ರಿಕ ನೆರವಿನ ಬಗ್ಗೆ ಐಸಿಜೆ ಆದೇಶಿಸಿಯೇ ಇಲ್ಲ: ಸರ್ತಾಜ್ ಅಜೀಜ್