Webdunia - Bharat's app for daily news and videos

Install App

ಮೋದಿ ಸರ್ಕಾರದಿಂದಲೇ ಭಾರತ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯಾಗಿದೆ : ನಿರ್ಮಲಾ ಸೀತಾರಾಮನ್

Webdunia
ಶುಕ್ರವಾರ, 11 ಆಗಸ್ಟ್ 2023 (08:53 IST)
ನವದೆಹಲಿ : ಯುಪಿಎ ಅವಧಿಯಲ್ಲಿ ಭಾರತವನ್ನು ದುರ್ಬಲ ಆರ್ಥಿಕತೆ ಎಂದು ಘೋಷಿಸಲಾಗಿತ್ತು. ಇಂದು ಕೊರೊನಾದಂತಹ ಸಂಕಷ್ಟದ ನಡುವೆಯೂ ಭಾರತ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯಾಗಿ ಹೊರ ಹೊಮ್ಮಿದೆ.

ಇದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವಿಶ್ವಾಸ ನಿರ್ಣಯದ ವಿರುದ್ಧ ಲೋಕಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆ ಏರಿಕೆಯಾಗಿ ಅಭಿವೃದ್ಧಿಯಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆಗಳನ್ನು ನೀಡಲಾಗುವುದು, ಮಾಡಲಾಗುವುದು ಎನ್ನಲಾಗುತ್ತಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆಗಳನ್ನು ನೀಡಿದೆ, ಮಾಡಿದೆ ಎನ್ನಲಾಗುತ್ತಿದೆ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ನಾವು ಅವರ ಕನಸುಗಳನ್ನು ನನಸಾಗಿಸುತ್ತಿದ್ದೇವೆ ಎಂದರು.

 2014 ಮತ್ತು 2019ರಲ್ಲಿ ಯುಪಿಎ ವಿರುದ್ಧ ಜನರು ಅವಿಶ್ವಾಸ ಮಂಡಿಸಿ ಯುಪಿಎ ಸೋಲಿಸಿದರು. 2024ರಲ್ಲೂ ಇದೇ ಪರಿಸ್ಥಿತಿ ಇರಲಿದೆ. ಯುಪಿಎ ಹೆಸರನ್ನು ಬದಲಾಯಿಸುವ ಅಗತ್ಯ ಏನಿತ್ತು? ಎಂದು ಗೃಹ ಸಚಿವರು ಕೇಳಿದರು. ಅದು ಒಂದು ಅದ್ಭುತವಾದ ಏಕತೆ. ಅವರು ಪರಸ್ಪರ ವಿರುದ್ಧ ಅಥವಾ ಒಟ್ಟಿಗೆ ಹೋರಾಡುತ್ತಿದ್ದಾರೆ ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments