Select Your Language

Notifications

webdunia
webdunia
webdunia
webdunia

ಹಡಗುಗಳ ಮೇಲಿನ ದಾಳಿಗೆ ಖಡಕ್ ಕೌಂಟರ್ ಕೊಟ್ಟ ಭಾರತ

oman coast vessel attack
Photo Courtesy X
ನವದೆಹಲಿ:  ಒಮಾನ್ ಕರಾವಳಿಯಲ್ಲಿ ಭಾರತದ ಮತ್ತೊಂದು ಹಡಗಿನ ಮೇಲೆ ದಾಳಿ ಬೆನ್ನಲ್ಲೇ ಹಡಗುಗಗಳ ಮೇಲಿನ ದಾಳಿ ಕುರಿತಂತೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. 

ನವದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಎದುರು ಪ್ರತಿಭಟನೆ ವ್ಯಕ್ತಪಡಿಸಿರುವ ಭಾರತ, ದಾಳಿಗಳು ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದೆ.

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಶಮನಕ್ಕೆ ಅಮೆರಿಕ ಮತ್ತು ಇರಾನ್ ಕೂಡಲೇ ರಾಜತಾಂತ್ರಿಕ ಮಾರ್ಗದ ಮೂಲಕ ಮಾತುಕತೆಗೆ ಮುಂದಾಗಬೇಕೆಂದು ಭಾರತ ಒತ್ತಿ ಹೇಳಿದೆ. 

ಇಂದು ಬೆಳಿಗ್ಗೆ ಒಮಾನ್ ಕರಾವಳಿಯಲ್ಲಿ ಭಾರತದ ಮತ್ತೊಂದು ಹಡಗಿನ ಮೇಲೆ ದಾಳಿ ಕುರಿತಾದ ವರದಿಗಳ ಬೆನ್ನಲ್ಲೇ ಭಾರತದಿಂದ ಈ ಪ್ರತಿಕ್ರಿಯೆ ಬಂದಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿಯಾಗಿದ್ದು, ಅಮೆರಿಕ ಮತ್ತು ಇರಾನ್ ಸಂಘರ್ಷದ ನೇರ ಪರಿಣಾಮ ಇದಾಗಿದೆ ಎಂದು ಹೇಳಿದರು.

ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲಿನ ದಾಳಿಯನ್ನು ನಾವು ಖಂಡಿಸಿದ್ದೇವೆ. ದುರದೃಷ್ಟವಶಾತ್ ನಮ್ಮ ಮೂವರು ನಾವಿಕರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣ ಜೆ ರಾವ್ ವಿರುದ್ಧದ ರೇಪ್ ಕೇಸ್‌: ಮಹತ್ವದ ಬೆಳವಣಿಗೆ