ಕಾಠ್ಮಂಡು : ನೇಪಾಳದ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭಾರತ 84 ವಾಹನಗಳನ್ನು ಭಾನುವಾರ ಉಡಗೊರೆಯಾಗಿ ನೀಡಿದೆ.
ನೇಪಾಳದ ಸಚಿವ ಅಶೋಕ್ ಕುಮಾರ್ ರೈ ಅವರ ಸಮ್ಮುಖದಲ್ಲಿ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ್ 34 ಅಂಬುಲೆನ್ಸ್ಗಳು ಮತ್ತು 50 ಶಾಲಾ ಬಸ್ಗಳನ್ನು ಸಂಸ್ಥೆಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸುಧಾರಿಸಲು ಅನುಕೂಲವಾಗಲು ಈ ವಾಹನಗಳನ್ನು ನೀಡಲಾಗಿದೆ. ಈ ವಿಚಾರದಲ್ಲಿ ನೇಪಾಳ ಸರ್ಕಾರದ ಪ್ರಯತ್ನಗಳಿಗೆ ನೆರವಾಗುವುದು ನೇಪಾಳ-ಭಾರತ ಅಭಿವೃದ್ಧಿ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಒಂದಾಗಿದೆ. ಅದರ ಅಡಿಯಲ್ಲಿ ವಾಹನಗಳನ್ನು ಉಡುಗೊರೆಯಾಗಿ ನೀಡುವುದು ಭಾರತ ಸರ್ಕಾರದ ದೀರ್ಘಕಾಲದ ಸಂಪ್ರದಾಯ ಎಂದು ಶ್ರೀವಾಸ್ತವ್ ಈ ವೇಳೆ ಹೇಳಿದ್ದಾರೆ.
ಜನರ ಜೀವನ ಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸುವುದು ಇದರ ಮೂಲ ಉದ್ದೇಶವಾಗಿದೆ. ಈ ಪ್ರಯತ್ನ ನೇಪಾಳದ ಅಭಿವೃದ್ಧಿ ದಾರಿಯಲ್ಲಿ ಸ್ಪಷ್ಟವಾದ ಪ್ರಗತಿಯನ್ನು ತರಲಿದೆ ಎಂದು ಸ್ಥಳೀಯ ಮೇಯರ್ ಹೇಳಿಕೊಂಡಿದ್ದಾರೆ.