“ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ ಭಾರತದ ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ” – ದೆಹಲಿಯ ಭಾರತ ಮಂಟಪಂವನ್ನು ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಈ ಭಾಷಣದ ಬಗ್ಗೆ ಹಲವು ಚರ್ಚೆಗಳು ಈಗ ಆರಂಭವಾಗಿದ್ದು ಅದರಲ್ಲೂ ಜಪಾನ್ ದೇಶವನ್ನು ಹಿಂದಿಕ್ಕಿಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.
ಹೀಗಾಗಿ ಇಲ್ಲಿ ಜಪಾನ್ ಅಭಿವೃದ್ಧಿಯಾಗಿದ್ದು ಹೇಗೆ? ಭಾರತ ಅಭಿವೃದ್ಧಿಯಾಗಿದ್ದು ಹೇಗೆ? ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಬೇಕಾದರೆ ಭಾರತ ಏನು ಮಾಡಬೇಕು? ಮತ್ತು ಭಾರತದ ಮುಂದಿರುವ ಸವಾಲು ಏನು? ಈ ವಿಷಯದ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಭಾರತ ಅಭಿವೃದ್ಧಿಯಾಗಿದ್ದು ಹೇಗೆ?
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ ಅಲಿಪ್ತ ನೀತಿಯನ್ನು ಅಳವಡಿಸಿಕೊಂಡಿತ್ತು. ಎರಡನೇ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಯುಎಸ್ಎಸ್ಆರ್ ಜೊತೆ ಶೀತಲ ಸಮರ ನಡೆಯುತ್ತಿತ್ತು. ಶೀತಲ ಸಮರ ನಡೆಯುತ್ತಿದ್ದರೂ ರಕ್ಷಣಾ ವಿಚಾರದಲ್ಲಿ ಭಾರತ ಯುಎಸ್ಎಸ್ಆರ್ ಜೊತೆ ಜಾಸ್ತಿ ವ್ಯವಹಾರ ಮಾಡಿತ್ತು.
ಇದು ಅಮೆರಿಕದ ಕಣ್ಣು ಕೆಂಪಗೆ ಮಾಡಿತ್ತು. ಈ ಮಧ್ಯೆ ಗಡಿಯಲ್ಲಿರುವ ಪಾಕಿಸ್ತಾನ ಮತ್ತು ಚೀನಾದ ಜೊತೆ ಯುದ್ಧ ಮಾಡಿತು. ವಿರೋಧಿ ರಾಷ್ಟ್ರಗಳು ಶಕ್ತಿಶಾಲಿ ಆಗುತ್ತಿದ್ದಂತೆ ಭಾರತ 1974 ಮತ್ತು 1998ರಲ್ಲಿಅಣು ಬಾಂಬ್ ಸ್ಫೋಟ ಮಾಡಿತು.