Webdunia - Bharat's app for daily news and videos

Install App

ಪೊಲೀಸರ ಚಲನವಲನ ನಿಗಾಕ್ಕೆ ಕ್ರಿಮಿನಲ್‌ಗಳಿಂದ ಸಿಸಿಟಿವಿ ಕ್ಯಾಮೆರಾ

Webdunia
ಭಾನುವಾರ, 8 ಮೇ 2016 (18:21 IST)
ದೆಹಲಿ ಪೊಲೀಸರು ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ನಿಗಾವಹಿಸಲು ಸಿಸಿಟಿವಿ ಜಾಲವನ್ನು ಹೊಂದಿದೆ. ಆದರೆ ಕ್ರಿಮಿನಲ್‌ಗಳು ಪೊಲೀಸರ ಚಲನವಲನದ ಜಾಡುಹಿಡಿಯಲು ತಮ್ಮ ಅಡಗುತಾಣಗಳ ಸುತ್ತಮುತ್ತ ಕ್ಯಾಮರಾಗಳನ್ನು ಅಳವಡಿಸಿರುವುದು ಪೊಲೀಸರನ್ನೇ ಚಕಿತಗೊಳಿಸಿದೆ. 
 
ಪೊಲೀಸರು ದಿಢೀರ್ ದಾಳಿ ನಡೆಸಿದಾಗಲೆಲ್ಲಾ ಪೂರ್ಣ ಕಾಲ ಜೂಜಾಡುವ ಒಂದು ಜಾಲ ಹೇಗೋ ತಪ್ಪಿಸಿಕೊಳ್ಳುತ್ತಿತ್ತು. ಇದರಿಂದ ಪೊಲೀಸರು ಅಚ್ಚರಿಗೊಂಡಿದ್ದರು. ಆದರೆ ಅಪರಾಧಿಗಳ ಜಾಡನ್ನು ಪತ್ತೆಹಚ್ಚಲು ಅಳವಡಿಸಿದ್ದ ಸಿಸಿಟಿವಿ ಜಾಲದ ಪ್ರಯೋಗವನ್ನು ಕ್ರಿಮಿನಲ್‌ಗಳು ಕೂಡ ಅಳವಡಿಸಿ ಪೊಲೀಸರ ದಾಳಿಯನ್ನು ಪೂರ್ವಭಾವಿಯಾಗಿ ಅರಿಯುತ್ತಿದ್ದಾರೆ. ಪೊಲೀಸರಿಗೆ ವಸಂತ್ ಗಾಂವ್ ಪ್ರದೇಶದಲ್ಲಿ ಜೂಜೂಕೋರರ ಅಡಗುತಾಣಗಳ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳ ಕುರಿತು ಮಾಹಿತಿ ಸಿಕ್ಕಿ ಗೌಪ್ಯ ಕಾರ್ಯಾಚರಣೆಗೆ ಯೋಜಿಸಿದರು. 
 
ಕ್ರಿಮಿನಲ್‌ಗಳು ಅಕ್ರಮ ಮದ್ಯ, ಜೂಜು ಜಾಲ ಮತ್ತು ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಮನೆಗಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಯಾವುದೇ ಪೊಲೀಸ್ ಪೇದೆ ಮನೆಯೊಳಗೆ ಪ್ರವೇಶಿಸಿದರೆ ಅವರು ಹಣ ಕೀಳಲು ಅಥವಾ ಮಹಿಳೆಯರಿಗೆ ಕಿರುಕುಳ ನೀಡಲು ಮನೆಯೊಳಗೆ ಪ್ರವೇಶಿಸುತ್ತಾರೆಂದು ದೂರು ನೀಡಲಾಗುತ್ತಿತ್ತು. ಇದಕ್ಕೆ ಮನೆಯ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳ ಸಾಕ್ಷ್ಯ ನೀಡುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ