Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿ ನಾಪತ್ತೆ: ಉಪಕುಲಪತಿಯನ್ನು ಅನ್ನ ನೀರಿಲ್ಲದೇ ಕೂಡಿ ಹಾಕಿದ ವಿದ್ಯಾರ್ಥಿಗಳು

ವಿದ್ಯಾರ್ಥಿ ನಾಪತ್ತೆ: ಉಪಕುಲಪತಿಯನ್ನು ಅನ್ನ ನೀರಿಲ್ಲದೇ ಕೂಡಿ ಹಾಕಿದ ವಿದ್ಯಾರ್ಥಿಗಳು
ನವದೆಹಲಿ , ಗುರುವಾರ, 20 ಅಕ್ಟೋಬರ್ 2016 (12:30 IST)
ಜೆಎನ್‌ಯು ಮತ್ತೆ ಸುದ್ದಿಯಲ್ಲಿದೆ. ವಿಶ್ವ ವಿದ್ಯಾಲಯದ ಎಮ್ಎಸ್ಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಉಪ ಕುಲಪತಿ ಎಮ್.ಜೆ ಕುಮಾರ್, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೂಡಿ ಹಾಕಿ ವಿದ್ಯಾರ್ಥಿ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಅಹೋ ರಾತ್ರಿ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 

ಸತತ 24 ಗಂಟೆಗಳ ಕಾಲ ಆಡಳಿತ ಕಚೇರಿಯಲ್ಲಿ ನಮ್ಮನ್ನು ಅನ್ನ- ನೀರಿಲ್ಲದೇ ಕೂಡಿ ಹಾಕಿ ಅಮಾನವೀಯ ನಡೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ ದೌರ್ಜನ್ಯಕ್ಕೆ ಒಳಗಾದವರಲ್ಲಿ ಮಹಿಳೆಯರು ಸಹ ಇದ್ದರು. 5 ಗಂಟೆ ಅನ್ನ ನೀರಿಲ್ಲದೇ ಕೆಲವರ ಆರೋಗ್ಯ ಸಹ ಹದಗೆಟ್ಟಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ ಎಂದು ಉಪ ಕುಲಪತಿ ಎಮ್. ಜೆ ಕುಮಾರ್ ಆರೋಪಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹಿತ್ ಪಾಂಡ್ಯ ನಾವು ಯಾರನ್ನು ಕೂಡ ಅಕ್ರಮವಾಗಿ ಬಂಧಿಸಿಲ್ಲ. ಅವರಿಗೆಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಹಾರವನ್ನು ಸಹ ಒದಗಿಸಲಾಗಿತ್ತು ಎಂದಿದ್ದಾರೆ.
 
ವಿಶ್ವವಿದ್ಯಾಲಯದ ಎಮ್‌ಎಸ್ಸಿ ವಿದ್ಯಾರ್ಥಿ ನಜೀಬ್ ಅಹ್ಮದ್ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ. ಈ ಕುರಿತು ಆತ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದಾರೆ. ಆತ ನಾಪತ್ತೆಯಾಗುವ ಮೊದಲ ದಿನ ವಿಶ್ವವಿದ್ಯಾಲಯದಲ್ಲಿ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆತ ನಾಪತ್ತೆಯಾಗಿದ್ದಾನೆಂದು ಹೇಳಲಾಗುತ್ತಿದೆ. ಆತನ ಪತ್ತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿ ಪೊಲೀಸ್ ಅಧೀಕ್ಷಕರಿಂದ ಮಾಹಿತಿಯನ್ನು ಪಡೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆಗೆ ತಡೆಯಾಜ್ಞೆ..