Select Your Language

Notifications

webdunia
webdunia
webdunia
webdunia

ಚುನಾವಣೆ ಎದುರಿಸಲು ಆಪ್ ಪಕ್ಷದ ಬಳಿ ಹಣವಿಲ್ಲ: ಅರವಿಂದ್ ಕೇಜ್ರಿವಾಲ್

ಚುನಾವಣೆ ಎದುರಿಸಲು ಆಪ್ ಪಕ್ಷದ ಬಳಿ ಹಣವಿಲ್ಲ: ಅರವಿಂದ್ ಕೇಜ್ರಿವಾಲ್
ಪಣಜಿ , ಸೋಮವಾರ, 22 ಆಗಸ್ಟ್ 2016 (16:32 IST)
ದೆಹಲಿಯಲ್ಲಿ ಸರಕಾರವಿದ್ದರೂ ಚುನಾವಣೆಗಳನ್ನು ಎದುರಿಸಲು ಆಮ್ ಆದ್ಮಿ ಪಕ್ಷದ ಬಳಿ ಹಣವಿಲ್ಲ ಎಂದು ಆಪ್ ಮುಖಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ
 
ದೆಹಲಿಯಲ್ಲಿ ಸುಮಾರು ಒಂದುವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಚುನಾವಣೆ ಎದುರಿಸಲು ಹಣದ ಕೊರತೆ ಎದುರಾಗಿದೆ. ನನ್ನ ಬ್ಯಾಂಕ್ ಖಾತೆಯನ್ನು ತೋರಿಸಲು ಸಿದ್ದವಾಗಿದ್ದೇನೆ. ಪಕ್ಷದಲ್ಲಿಯೂ ಹಣವಿಲ್ಲ ಎಂದು ತಿಳಿಸಿದ್ದಾರೆ.  
 
ನಾವು ದೆಹಲಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನಮ್ಮ ಪರವಾಗಿ ಜನತೆ ಹೋರಾಟ ನಡೆಸಿದ್ದರು. ಉತ್ತಮ ಭವಿಷ್ಯ ಬಯಸುವವರಿಗೆ ಆಪ್ ಪಕ್ಷದ ವೇದಿಕೆ ಸೂಕ್ತವಾಗಿದೆ ಎಂದರು.
 
ಅದರಂತೆ, ಗೋವಾದಲ್ಲೂ ಸ್ಥಳೀಯ ಜನತೆ ಆಪ್ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಒಂದು ವೇಳೆ ಆಪ್ ಪಕ್ಷ ಬಹುಮತ ಗಳಿಸಿದಲ್ಲಿ ಹೈಕಮಾಂಡ್ ಸಂಸ್ಕ್ರತಿಯನ್ನು ಬಿಂಬಿಸುವುದಿಲ್ಲ ಎಂದು ಭರವಸೆ ನೀಡಿದರು.   
 
ಗೋವಾ ಮೂಲದವರೇ ಗೋವಾ ರಾಜ್ಯವನ್ನು ಆಳಲಿದ್ದಾರೆ. ಪಕ್ಷದ ಪ್ರಣಾಳಿಕೆಯನ್ನು ಕೂಡಾ ಗೋವಾ ಮೂಲದವರೇ ತಯಾರಿಸಿದ್ದಾರೆ. ರಾಜ್ಯದ ಜನತೆಗೆ ಅಗತ್ಯವಾಗಿರುವುದನ್ನು ಗೋವಾ ಮೂಲದವರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. 
 
ಗೋವಾ ರಾಜ್ಯದಲ್ಲಿರುವ ಸಮಸ್ಯೆಗಳನ್ನು ಅರಿಯಲು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
 
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವಹಿವಾಟಿನಲ್ಲಿ ಪೊಲೀಸರು, ರಾಜಕಾರಣಿಗಳು ಶಾಮೀಲಾಗಿದ್ದರಿಂದ ವಹಿವಾಟು ಎಗ್ಗಿಲ್ಲದೇ ಮುಂದುವರಿದಿದೆ. ಒಂದು ವೇಳೆ, ಗೋವಾ ಸರಕಾರ ಬಯಸಿದಲ್ಲಿ ಮುಂದಿನ ಒಂದು ಗಂಟೆಯೊಳಗೆ ಮಾದಕ ವಸ್ತು ವಹಿವಾಟು ಸ್ಥಗಿತಗೊಳ್ಳುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಿಂದ ಎಬಿವಿಪಿ ಸಂಘಟನೆ ದುರ್ಬಳಕೆ: ದಿನೇಶ್ ಗುಂಡೂರಾವ್ ಆರೋಪ