Select Your Language

Notifications

webdunia
webdunia
webdunia
webdunia

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರಕಾರಿ ಉದ್ಯೋಗಕ್ಕೆ ಅನರ್ಹರು

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರಕಾರಿ ಉದ್ಯೋಗಕ್ಕೆ ಅನರ್ಹರು
ಗುವಾಹಟಿ , ಸೋಮವಾರ, 10 ಏಪ್ರಿಲ್ 2017 (18:23 IST)
ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಪೋಷಕರು ಸರಕಾರಿ ಉದ್ಯೋಗಕ್ಕೆ ಅನರ್ಹರು ಎಂದು ಆಸ್ಸಾಂ ಸರಕಾರ ಘೋಷಿಸಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಹಿಮಾಂತಾ ಬಿಸ್ವಾ ಸರ್ಮಾ, ಕರಡು ಜನಸಂಖ್ಯಾ ನೀತಿಯಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಯಾವುದೇ ಸರಕಾರಿ ಉದ್ಯೋಗ ಪಡೆಯಲು ಅನರ್ಹರು ಎನ್ನುವ ನೀತಿ ಅಳವಡಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.  
 
ಸರಕಾರಿ ಉದ್ಯೋಗದಲ್ಲಿರುವವರು ತಮ್ಮ ಸೇವೆಯ ಕೊನೆಯವರೆಗೆ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೆರದಿರುವ ಷರತ್ತುಗಳನ್ನು ಪಾಲಿಸಿಕೊಂಡು ಬರುವುದು ಅಗತ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ರಾಜ್ಯ ಸರಕಾರ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳಾದ ಟ್ರ್ಯಾಕ್ಟರ್‌ಗಳ ನೀಡಿಕೆ, ಗೃಹ ಸೌಲಭ್ಯ ಮತ್ತು ಇತರ ಸರಕಾರಿ ಸೌಲಭ್ಯಗಳು ಎರಡು ಮಕ್ಕಳಿರುವವರಿಗೆ ಮಾತ್ರ ಲಭ್ಯವಾಗಲಿದೆ. ಅದನ್ನು ಹೊರತುಪಡಿಸಿ ಪಂಚಾಯಿತಿ, ನಗರಸಭೆ, ಸ್ವಾಯುತ್ತ ಸಂಸ್ಥೆ ಸೇರಿದಂತೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸಬಯಸಿದವರು ಕೂಡಾ ಈ ಷರತ್ತಿಗೆ ಒಳಪಡುತ್ತಾರೆ ಎಂದು ತಿಳಿಸಿದ್ದಾರೆ. 
 
ಶಾಲಾ ಶುಲ್ಕ, ಪ್ರಯಾಣ, ಪುಸ್ತಕ ಮತ್ತು ವಸತಿಗೃಹದ ಊಟದ ವೆಚ್ಚ ಸೇರಿದಂತೆ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯ ಮಟ್ಟದವರೆಗೂ ಉಚಿತ ಶಿಕ್ಷಣ ನೀಡಲು ಸರಕಾರ ಚಿಂತನೆ ನಡೆಸಿದೆ. ಇದರಿಂದ ಬಡತನದಿಂದಾಗಿ ಶಿಕ್ಷಣ ಪಡೆಯಲು ಸಾಧ್ಯವಾಗವರು ಕೂಡಾ ಶಿಕ್ಷಣವನ್ನು ಪಡೆಯಬಹುದಾಗಿದೆ ಎಂದು ಆಸ್ಸಾಂ ಶಿಕ್ಷಣ ಖಾತೆ ಸಚಿವ ಹಿಮಾಂತಾ ಬಿಸ್ವಾ ಸರ್ಮಾ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಕಚೇರಿ ಬಳಿ ನಗ್ನರಾಗಿ ಪ್ರತಿಭಟಿಸಿದ ತಮಿಳುನಾಡು ರೈತರು