Daily Horoscope

Select Your Language

Notifications

webdunia
webdunia
webdunia
webdunia

ಎಲ್‌ಪಿಜಿ ಲಭ್ಯತೆಯಲ್ಲಿ ಸುಧಾರಿಕೆ, ಗ್ರಾಹಕರಿಗೆ ಕೇಂದ್ರದಿಂದ ಗುಡ್‌ನ್ಯೂಸ್‌

Gas Cylinder
ಗ್ರಾಮೀಣ ಕುಟುಂಬಗಳಿಗೆ ಅನ್ವಯವಾಗುತ್ತಿದ್ದ ಎಲ್‌ಪಿಜಿ  ಸಿಲಿಂಡರ್ ಮರುಭರ್ತಿ  ಬುಕಿಂಗ್ ನಿರ್ಬಂಧವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಇನ್ನು ಮುಂದೆ 45 ದಿನಗಳವರೆಗೆ ಕಾಯುವ ಬದಲು, 25 ದಿನಗಳ ನಂತರವೇ ಹೊಸ ಸಿಲಿಂಡರ್‌ಗೆ ಬುಕ್ ಮಾಡಬಹುದು. 

ಎಲ್‌ಪಿಜಿ ಲಭ್ಯತೆಯಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಸಚಿವ ಸುರೇಶ್ ಗೋಪಿ ಸೋಮವಾರ ಪ್ರಕಟಿಸಿದರು.

ದೇಶಾದ್ಯಂತ ಎಲ್‌ಪಿಜಿ ಲಭ್ಯತೆ ಸುಧಾರಿಸಿರುವುದರಿಂದ, ಎಲ್ಲಾ ಗೃಹಬಳಕೆಯ ಗ್ರಾಹಕರಿಗೆ ಎಲ್‌ಪಿಜಿ ಮರುಭರ್ತಿ ಬುಕಿಂಗ್ ಅವಧಿಯನ್ನು 25 ದಿನಗಳಿಗೆ ಇಳಿಸಲಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಘೋಷಿಸಿದರು. ಇದು ಗ್ರಾಮೀಣ ಕುಟುಂಬಗಳಿಗೆ ಇದ್ದ ಹಿಂದಿನ 45 ದಿನಗಳ ನಿರ್ಬಂಧದ ಬದಲಾವಣೆಯಾಗಿದೆ.

ಪರಿಷ್ಕೃತ ನಿಯಮದ ಪ್ರಕಾರ, ಈಗ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಇರುವ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರು 25 ದಿನಗಳ ನಂತರ ತಮ್ಮ ಹೊಸ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಈ ಬದಲಾವಣೆಯನ್ನು ತಕ್ಷಣವೇ ಜಾರಿಗೆ ತರುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಈಗಾಗಲೇ ನಿರ್ದೇಶನ ನೀಡಿದೆ ಎಂದು ಗೋಪಿ ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಸತ್ಯ ನಿಕೇತನ್ ಪಿಜಿ ದುರಂತ: ವಿದ್ಯಾರ್ಥಿಯ ದೇಹ ಹೊರತೆಗೆಯುವಾಗ ಏನಾಯ್ತು, ಮನಕಲಕುವ video