Select Your Language

Notifications

webdunia
webdunia
webdunia
webdunia

ಇಬ್ಬರು ಪುರುಷರೊಂದಿಗೆ ಪತ್ನಿ ಸೆಕ್ಸ್: ಅಡ್ಡಿಯಾದ ಪತಿಯ ನಾಲಿಗೆ ಕಚಕ್ ಎನ್ನಿಸಿದ ಪತ್ನಿ

ಇಬ್ಬರು ಪುರುಷರೊಂದಿಗೆ ಪತ್ನಿ ಸೆಕ್ಸ್: ಅಡ್ಡಿಯಾದ ಪತಿಯ ನಾಲಿಗೆ ಕಚಕ್ ಎನ್ನಿಸಿದ ಪತ್ನಿ
ಮುರಾದಾಬಾದ್: , ಬುಧವಾರ, 12 ಅಕ್ಟೋಬರ್ 2016 (19:39 IST)
ಪತ್ನಿ ಇಬ್ಬರು ಪುರುಷರೊಂದಿಗೆ ಮನೆಯಲ್ಲಿಯೇ ಸೆಕ್ಸ್‌ನಲ್ಲಿ ತೊಡಗಿದ್ದನ್ನು ಪತಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಆಕೆ ಪತಿಯ ನಾಲಿಗೆಯನ್ನೇ ಕಚಕ್ ಎನ್ನಿಸಿದ ಹೇಯ ಘಟನೆ ವರದಿಯಾಗಿದೆ. 
ಕಾರ್ಮಿಕನಾಗಿದ್ದ ಪತಿ ಜಿತೇಂದ್ರ ತನ್ನ ಪತ್ನಿಯೊಂದಿಗೆ ಧರ್ಮಪುರಿ ಪಟ್ಟಣದಲ್ಲಿ ವಾಸವಾಗಿದ್ದ. ನಿನ್ನೆ ಕೆಲಸದಿಂದ ಬೇಗ ಬಂದ ಪತಿಗೆ ಮನೆಯಲ್ಲಿ ಯಾರೋ ಪುರುಷರ ಧ್ವನಿ ಕೇಳಿ ಬೆಚ್ಚಿ ಬಿದ್ದಿದ್ದಾನೆ. ನಂತರ ಕಿಟಕಿಯಲ್ಲಿ ನೋಡಿದಾಗ ಪತ್ನಿ ಇಬ್ಬರು ಪುರುಷರೊಂದಿಗೆ ಸೆಕ್ಸ್‌ನಲ್ಲಿ ತೊಡಗಿರುವುದು ಕಂಡು ಬಂದಿದೆ.  
 
ಪತ್ನಿಯ ಹೇಯ ಕೃತ್ಯದಿಂದ ಆಕ್ರೋಶಗೊಂಡ ಪತಿ ಮನೆಯೊಳಗೆ ನುಗ್ಗಿದ್ದಾನೆ. ಪತ್ನಿಯನ್ನು ಹಿಡಿದುಕೊಂಡು ಚಚ್ಚಬೇಕು ಎನ್ನುವಾಗಲೇ ಆಕೆಯ ಇಬ್ಬರು ಪ್ರಿಯಕರರು ಪತಿಯ ಮೇಲೆ ದಾಳಿ ಮಾಡಿದ್ದಾರೆ.
 
ಘಟನೆಯ ಬಗ್ಗೆ ಯಾರಿಗಾದರೂ ಬಾಯಿಬಿಟ್ಟಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿ ಆತನ ನಾಲಿಗೆಯನ್ನು ಕತ್ತರಿಸಿ ಹಾಕಿ ಪತ್ನಿ ಮತ್ತು ಆಕೆಯ ಇಬ್ಬರು ಪ್ರಿಯಕರರು ಪರಾರಿಯಾಗಿದ್ದಾರೆ.
 
ತನ್ನ ಅರ್ಧ ಕತ್ತರಿಸಿದ ನಾಲಿಗೆಯನ್ನು ತೆಗೆದುಕೊಂಡ ಪತಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಂತರ ಪೊಲೀಸ್ ಠಾಣೆಗೆ ತೆರಳಿ ಪತ್ನಿ ಮತ್ತು ಆಕೆಯ ಇಬ್ಬರು ಪ್ರಿಯಕರರ ವಿರುದ್ಧ ದೂರು ದಾಖಲಿಸಿದ್ದಾನೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ವಿವಾದ: ಮಹಾರಾಷ್ಟ್ರ ಸಿಎಂ ಭೇಟಿಯಾದ ಬಿಜೆಪಿ ನಾಯಕರು