Select Your Language

Notifications

webdunia
webdunia
webdunia
webdunia

ಎನ್ ಡಿಎ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾದರೆ ನೆಹರೂ ದಾಖಲೆ ಸಮ

Narendra Modi

Krishnaveni K

ನವದೆಹಲಿ , ಮಂಗಳವಾರ, 4 ಜೂನ್ 2024 (07:34 IST)
ನವದೆಹಲಿ: ಇಂದು ಲೋಕಸಭೆ ಚುನಾವಣೆ 2024 ರ ಮತ ಎಣಿಕೆ ಕಾರ್ಯಕ್ರಮ ನಡೆಯಲಿದ್ದು, ಇಂದು ಮೋದಿ ನೇತೃತ್ವದ ಎನ್ ಡಿಎ ಗೆದ್ದರೆ ಹೊಸ ದಾಖಲೆಯಾಗಲಿದೆ.

ಭಾರತದಲ್ಲಿ ಒಬ್ಬರೇ ವ್ಯಕ್ತಿ ಮೂರು ಬಾರಿ ಪ್ರಧಾನಿಯಾದ ದಾಖಲೆ ಮಾಡಿದವರೆಂದರೆ ಪ್ರಥಮ ಪ್ರಧಾನ ಜವಹರಲಾಲ್ ನೆಹರೂ ಮಾತ್ರ. ಒಂದು ವೇಳೆ ಇಂದು ಅಂತಿಮವಾಗಿ ಎನ್ ಡಿಎ ಕೂಟ ಗೆದ್ದು ಮೋದಿ ಮತ್ತೆ ಪ್ರಧಾನಿಯಾದರೆ ನೆಹರೂ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಜವರಹರಲಾಲ್ ನೆಹರೂ ಒಟ್ಟು ಮೂರು ಅವಧಿಯಲ್ಲಿ ಸತತವಾಗಿ ಪ್ರಧಾನಿಯಾದವರು.  1947 ರಿಂದ 1964 ರವರೆಗೆ ನೆಹರೂ ಮೂರು ಅವಧಿಯಲ್ಲಿ ಪ್ರಧಾನಿಯಾಗಿ ದಾಖಲೆ ಮಾಡಿದ್ದರು. 1964 ರಲ್ಲಿ ಅವರು ತೀರಿಕೊಂಡರು. ಇದುವರೆಗೆ ಯಾವ ಪ್ರಧಾನಿಯೂ ಸತತವಾಗಿ ಮೂರು ಬಾರಿ ಅಧಿಕಾರ ನಡೆಸಿಲ್ಲ.

ಇದೀಗ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನೆಹರೂ ದಾಖಲೆ ಸರಿಗಟ್ಟಲಿದ್ದಾರೆ. ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಈ ದಾಖಲೆ ಮಾಡಿದ ಮೊದಲಿಗ ಎನಿಸಿಕೊಳ್ಳಲಿದ್ದಾರೆ. ಮೋದಿ ಮೊದಲ ಬಾರಿ 2014 ರಲ್ಲಿ ಪ್ರಧಾನಿಯಾದರು. ಎರಡನೇ ಅವಧಿ 2019 ರಿಂದ 2024 ರವರೆಗೆ ಇತ್ತು. ಇದೀಗ  ಮೂರನೇ ಅವಧಿಗೆ ಆಯ್ಕೆಯಾಗುತ್ತಾರಾ ಎಂದು ಕೆಲವೇ ಕ್ಷಣಗಳಲ್ಲಿ ತಿಳಿದುಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸುಳ್ಳು ಹೇಳುವುದಿಲ್ಲ, ಈ ಬಾರಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರತ್ತದೆ: ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌