Webdunia - Bharat's app for daily news and videos

Install App

ಯಾರ ಸಚಿವ ಸ್ಥಾನ ಕೈ ತಪ್ಪಿದ್ದರ ಹಿಂದೆ ನನ್ನ ಕೈವಾಡವಿಲ್ಲ: ಖರ್ಗೆ

Webdunia
ಗುರುವಾರ, 23 ಜೂನ್ 2016 (09:21 IST)
ಯಾರ ಸಚಿವ ಸ್ಥಾನ ಕೈ ತಪ್ಪಿದ್ದರ ಹಿಂದೆ ನನ್ನ ಕೈವಾಡವಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
 
ತಮ್ಮ ಸಚಿವ ಸ್ಥಾನ ತಪ್ಪಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಜತೆಜತೆಗೆ  ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಹ 
ರೆಬೆಲ್ ಶಾಸಕರು( ವಿ ಶ್ರೀನಿವಾಸ್ ಪ್ರಸಾದ್, ಖಮರೂಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್) ರ್ಟಾರ್ಗೆಟ್ ಮಾಡಿದ್ದರು. ನಮ್ಮನ್ನು ರಕ್ಷಿಸಲು ಖರ್ಗೆ ಪ್ರಯತ್ನ ಮಾಡಲಿಲ್ಲ. ಖರ್ಗೆ  ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿರೋಧಿ ಧೋರಣೆ ತೋರಿದ್ದಾರೆ ಎಂದು ಅವರುಆರೋಪಿಸಿದ್ದರು.
 
ಈ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಖರ್ಗೆ ತಮ್ಮ ಆಪ್ತರ ಮೂಲಕ ರೆಬೆಲ್ ಶಾಸಕರಿಗೆ ಸಂದೇಶವನ್ನು ಕಳುಹಿಸಿದ್ದಾರೆ. 
 
ಇಡೀ ಸಂಪುಟ ಪುನರ್ ರಚನೆಯಲ್ಲಿ ನನ್ನ ಪಾತ್ರವಿಲ್ಲ. ಖಾತೆ ಬದಲಾವಣೆಯಾದರೂ ಸಣ್ಣಪುಟ್ಟ ಖಾತೆಯನ್ನಾದರೂ ನೀಡಿ ಸಂಪುಟದಲ್ಲಿರಿಸಿಕೊಳ್ಳಿ ಎನ್ನುವುದರ ಮೂಲಕ ನಿಮ್ಮನ್ನು ಉಳಿಸುವ ಪ್ರಯತ್ನ ಮಾಡಿದ್ದೆ. ವರಿಷ್ಠರ ನಿರ್ಧಾರದಂತೆ ಸಿಎಂ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂಗು ಖರ್ಗೆ ತಿಳಿಸಿದ್ದಾರೆ. 
 
ನನ್ನನ್ನು ಅಲ್ಪಸಂಖ್ಯಾತರ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ನನಗೆ ಬೇಸರವಾಗಿದೆ. ಈ ಹಿಂದೆ ಅಡ್ಡ ಮತದಾನದ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ಸರಡಗಿಗೆ ಸೋಲಾಗಿತ್ತು. ಆದರೆ ನಾನೇ ಹಠ ಹಿಡಿದು ಪರಿಷತ್‌ಗೆ ಅವರನ್ನು ನಾಮ ನಿರ್ದೇಶನ ಮಾಡಿಕೊಂಡಿದ್ದೆ. ಕೆ. ಸಿ ಕೊಂಡಯ್ಯ ಟಿಕೆಟ್ ಕೊಡಲು ಎಲ್ಲರಿಂದಲೂ ವಿರೋಧ ವ್ಯಕ್ತವಾದಾಗ ನಾನೇ ವಿಧಾನ ಪರಿಷತ್‌ಗೆ ಅವರಿಗೆಟಿಕೆಟ್ ಕೊಡಿಸಿದ್ದೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಹಲವು ಮಹಿಳೆಯರಿಂದ ಬೇಡಿಕೆ ಬಂದಿತ್ತು. ಆದರೆ ನಾನು ವೀಣಾ ಅಚ್ಚಯ್ಯನವರಿಗೆ ಟಿಕೆಟ್ ಕೊಡಿಸಿದ್ದೆ. ನಾನು ಅಲ್ಪಸಂಖ್ಯಾತ ವಿರೋಧಿಯಲ್ಲ ಎಂದು ಖರ್ಗೆ ಸ್ಪಷ್ಟನೆ ನೀಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ

ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್‌ಕೌಂಟರ್‌, 30 ಸಾವಿರ ಕ್ರಿಮಿನಲ್‌ಗಳ ಅರೆಸ್ಟ್‌

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

ಮುಂದಿನ ಸುದ್ದಿ
Show comments