ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಕಾರಣಿಭೂತರಾದ ಮತದಾರರಿಗೆ ನನ್ನ ಅಭಿನಂದನೆಗಳು. ನನ್ನ ಕೊನೆಯ ಉಸಿರಿರುವರೆಗೆ ಜನತೆಗಾಗಿ ದುಡಿಯುತ್ತೇನೆ ಎಂದು ಮುಖ್ಯಮಂತ್ರಿ ಜೆ.ಜಯಲಲಿತಾ ಹೇಳಿದ್ದಾರೆ.
ಇಷ್ಟು ದಿನವು ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ. ಜನರಿಗಾಗಿ ದುಪಡಿಯುವುದು ಬಿಟ್ಟರೆ ನನಗೆ ಬೇರೆ ಗೊತ್ತಿಲ್ಲ
ಐತಿಹಾಸಿಕ ಗೆಲುವು ನೀಡಿದ ಜನತೆಗೆ ಧನ್ಯವಾದಗಳು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಜನತೆಗಾಗಿ ನನ್ನ ಜೀವನ ಅರ್ಪಣೆ.ಚುನಾವಣಾ ಪ್ರರ್ಣಾಳಿಕೆ ಈಡೇರಿಕೆಗೆ ಸದಾ ಬದ್ಧರಾಗಿದ್ದೇವೆ. ನನ್ನ ಮಕ್ಕಳಿಗಾಗಿ ಅಣ್ಣ ತಮ್ಮಂದಿರಿಗಾಗಿ ಅಕ್ಕ ತಂಗಿಯರಿಗಾಗಿ ದುಡಿಯುತ್ತೇನೆ ಎಂದು ಘೋಷಿಸಿದರು.
1994ರ ಬಳಿಕೆ ಯಾವುದೇ ಪಕ್ಷ 2ನೇ ಬಾರಿಗೆ ಅಧಿಕಾರಕ್ಕೆ ಏರಿಲ್ಲ. ಆದರೆ, ಜನತೆಯ ಆಶೀರ್ವಾದದಿಂದ ನಾವು 2ನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ ನಮ್ಮ ಮೇಲೆ ಎಂಜಿಆರ್ ಅವರ ಆಶೀರ್ವಾದವಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ..