Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್‌ನನ್ನು ಕೊಲ್ಲುತ್ತೇನೆ: ಪೊಲೀಸರಿಗೆ ಪೋನ್ ಕರೆ

ಕೇಜ್ರಿವಾಲ್‌ನನ್ನು ಕೊಲ್ಲುತ್ತೇನೆ: ಪೊಲೀಸರಿಗೆ ಪೋನ್ ಕರೆ
ನವದೆಹಲಿ , ಗುರುವಾರ, 27 ಅಕ್ಟೋಬರ್ 2016 (12:55 IST)
ವ್ಯಕ್ತಿಯೊಬ್ಬ ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಇರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. 

ಬುಧವಾರ ದೆಹಲಿ ಪೊಲೀಸ್ ಠಾಣೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಇದು ಹುಸಿ ಕರೆ ಎಂದು ತಿಳಿದು ಬಂದಿದೆ. 
 
ಕಾಲ್ ಮಾಡಿದಾತ ಆ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಮತ್ತು ಆತನ ಮಾನಸಿಕ ಸ್ಥಿತಿ ಸರಿಯಾಗಿಲ್ಲವೆಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. 
 
ನಿಜಕ್ಕೂ ನಡೆದಿದ್ದೇನು?
 
ಬುಧವಾರ ಸಂಜೆ ಸುಮಾರು 6.16ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಮಾಡಿದ ವ್ಯಕ್ತಿ ತಾನು ಕೇಜ್ರಿವಾಲ್ ಅವರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರುಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಸಫಲರಾಗಿದ್ದಾರೆ.
 
ಕಾಲ್ ಮಾಡಿದಾತನನ್ನು ರವೀಂದರ್ ಕುಮಾರ್ ತಿವಾರಿ ಎಂದು ಗುರುತಿಸಲಾಗಿದ್ದು ಆತ ವಾಯುವ್ಯ ದೆಹಲಿಯ ಖಜುರಿ ಖಾಸ್ ನಿವಾಸಿಯಾಗಿದ್ದಾನೆ. ಪೊಲೀಸರು ಆತನ ಮನೆಗೆ ಧಾವಿಸಿದಾಗ ನೆರೆಹೊರೆಯವರು ಆತ ಕುಡುಕ ಮತ್ತು ಮಾನಸಿಕ ಅಸ್ಥಿರತೆ ಹೊಂದಿದ್ದಾನೆ ಎಂದು ಹೇಳಿದ್ದಾರೆ. 
 
'ನಾನು ಕೇಜ್ರಿವಾಲ್ ಅವರನ್ನು ಶೂಟ್ ಮಾಡುತ್ತೇನೆ'
 
ಫೋನ್ ಕರೆ ಮಾಡಿದ ವ್ಯಕ್ತಿ ನಾನು  ಕೇಜ್ರಿವಾಲ್ ಅವರನ್ನು ಶೂಟ್ ಮಾಡುತ್ತೇನೆ ಎಂದ, ನೀನು ಯಾರೆಂದು ಕೇಳಿದಾಗ ನಾನು ಗುಂಡಿಕ್ಕಿ ಕೊಲ್ಲಲ್ಪಟ್ಟರೆ ಮಾತ್ರ ನಾನು ನನ್ನ ಗುರುತನ್ನು ಬಹಿರಂಗ ಪಡಿಸುತ್ತೇನೆ ಎಂದು ಅಸಂಬದ್ಧ ಉತ್ತರ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
 
ಮುನ್ನೆಚ್ಚರಿಕೆಯ ಕ್ರಮವಾಗಿ ಮುಖ್ಯಮಂತ್ರಿ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಜಿಹಾದಿಗಳಿಂದಲೇ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ?