Select Your Language

Notifications

webdunia
webdunia
webdunia
webdunia

ಗೋವುಗಳನ್ನು ಹಿಂಸಿಸುವವರ ಕೈ ಕಾಲು ಕಡಿಯುತ್ತೇನೆಂದ ಬಿಜೆಪಿ ಶಾಸಕ

ಗೋವುಗಳನ್ನು ಹಿಂಸಿಸುವವರ ಕೈ ಕಾಲು ಕಡಿಯುತ್ತೇನೆಂದ ಬಿಜೆಪಿ ಶಾಸಕ
NewDelhi , ಭಾನುವಾರ, 26 ಮಾರ್ಚ್ 2017 (11:30 IST)
ನವದೆಹಲಿ: ಗೋವುಗಳನ್ನು ಹಿಂಸಿಸುವವರ ಅಥವಾ ಕೊಲ್ಲುವವರ ಕೈ ಕಾಲು ಕಡಿಯುತ್ತೇನೆ ಎಂದು ಉತ್ತರಪ್ರದೇಶದ ವಿವಾದಿತ ಶಾಸಕ ವಿಕ್ರಂ ಸಾಯ್ನಿ ಗುಡುಗಿದ್ದಾರೆ.

 

ಮುಝಾಫರ್ ನಗರ ಗಲಭೆಯ ರೂವಾರಿ ಸಾಯ್ನಿಗೆ ವಿವಾದಿತ ಹೇಳಿಕೆ ನೀಡದಂತೆ ಬಿಜೆಪಿ ಎಚ್ಚರಿಕೆ ನೀಡಿದರೂ, ಅವರು ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ. ‘ವಂದೇ ಮಾತರಂ ಹೇಳಲು ಇಷ್ಟಪಡದವರು, ದೈವ ಸಮಾನವಾದ ಗೋ ಮಾತೆಗೆ ಗೌರವ ಕೊಡದವರ ಕೈ ಕಾಲು ಕತ್ತರಿಸಲು ನನಗೆ ಹಿಂಜರಿಕೆಯಿಲ್ಲ’ ಎಂದು ಅವರು ಹೇಳಿದ್ದಾರೆ.

 
ಅವರು ಈ ಮಾತು ಹೇಳುತ್ತಿದ್ದಂತೆ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆದರೆ ವೇದಿಕೆಯಲ್ಲಿದ್ದ ಇತರ ಬಿಜೆಪಿ ನಾಯಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ ಘಟನೆಯೂ ನಡೆಯಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಮೀನುಗಾರರ ಮೇಲೆ ಮತ್ತೆ ಶ್ರೀಲಂಕಾ ಉದ್ಧಟತನ