Webdunia - Bharat's app for daily news and videos

Install App

ಬಿಜೆಪಿ ಸಚಿವನಿಗೆ ಅರ್ಥವಾಗಿಲ್ವಂತೆ ಪ್ರಧಾನಿ ಮೋದಿಯ ಜಿಎಸ್‌ಟಿ

Webdunia
ಶುಕ್ರವಾರ, 10 ನವೆಂಬರ್ 2017 (13:51 IST)
ದೇಶದಾದ್ಯಂತ ವಿಪಕ್ಷಗಳು ಜಿಎಸ್‌ಟಿ ಜಾರಿಗೊಳಿಸಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ, ಹೌದ್ರಿ ಜಿಎಸ್‌ಟಿ ಎಂದರೆ ನನಗೂ ಅರ್ಥವಾಗಿಲ್ಲ ಎಂದು ಹೇಳಿಕೆ ನೀಡಿದ ಮಧ್ಯಪ್ರದೇಶದ ಸಚಿವ ಓಂ ಪ್ರಕಾಶ್ ಧೂರ್ವೆ ಬಿಜೆಪಿ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿ ಸಚಿವರಿಗೆ ಜಿಎಸ್‌ಟಿ ಬಗ್ಗೆ ಅರ್ಥವಾಗಿಲ್ಲ. ಜನಸಾಮಾನ್ಯರಿಗೆ ಹೇಗೆ ಜಿಎಸ್‌ಟಿ ಅರ್ಥವಾಗುತ್ತದೆ. ಪ್ರಧಾನಿ ಮೋದಿಯ ಜಿಎಸ್‌ಟಿ ಯಾರಿಗೂ ಅರ್ಥವಾಗದ ಜಿಎಸ್‌ಟಿ ಎಂದು ವಿಪಕ್ಷಗಳ ಮುಖಂಡರು ಲೇವಡಿ ಮಾಡಿದ್ದಾರೆ. 
 
ನವದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಸಂಪುಟದ ಜಿಎಸ್‌ಟಿ ಸಭೆ ನಡೆಸುವ ಮುನ್ನವೇ, ಜಿಎಸ್‌‌ಟಿ ಅಂದರೇನು ನನಗೇನು ಅರ್ಥವಾಗಿಲ್ಲ. ಅದರ ಬಗ್ಗೆ ನನಗೆ ಹೆಚ್ಚಿನ ತಿಳುವಳಿಕೆಯಿಲ್ಲ. ನೋಟ್ ಬ್ಯಾನ್, ಜಿಎಸ್‌ಟಿ ಅಂಗವಾಗಿ ನಡೆದ ಚರ್ಚಾಸಭೆಯಲ್ಲಿ ಸಚಿವರು ತಮ್ಮ ಜ್ಞಾನವನ್ನು ಬಹಿರಂಗಪಡಿಸಿದ್ದಾರೆ.   
 
ಸಿಎ, ಉದ್ಯಮಿಗಳಿಗೂ ಸಹ ಜಿಎಸ್ ಟಿ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದು ಧೂರ್ವೆ ಹೇಳಿದ್ದು, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗಲೇ ನನಗೆ ಸಮಾಧಾನವಾಗುತ್ತದೆ ಎಂದು ಸಚಿವ ಓಂ ಪ್ರಕಾಶ್ ಧೂರ್ವೆ ನೀಡಿದ ಹೇಳಿಕೆ ಬಿಜೆಪಿಯಲ್ಲಿಯೇ ಕೋಲಾಹಲ ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments